

ಚಳ್ಳಕೆರೆ: ಧಾರ್ಮಿಕ, ಪೂಜಾ ಹಾಗೂ ಸಮಾಜ ಸೇವಾ ಕಾರ್ಯಗಳು ನೆಮ್ಮದಿಗೆ ರಹದಾರಿ ಆಗಿದ್ದು, ಮಾನವೀಯ ಸಂಬಂಧ ವೃದ್ಧಿಗೆ ಸಹಕಾರಿ ಆಗಿವೆ ಎಂದು ಸಾಮಾಜಿಕ ಸೇವಾ ಕಾರ್ಯಕರ್ತ ಡಿ.ತಿಪ್ಪೇರುದ್ರಪ್ಪ ಹೇಳಿದರು.
ಕಡೇ ಶ್ರಾವಣ ಶನಿವಾರ ಅಂಗವಾಗಿ ತಾಲೂಕಿನ ಹೊಟ್ಟೆಪ್ಪನಹಳ್ಳಿ ಹೊರವಲಯದ ತಿಮ್ಮನಮಟ್ಟಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಕ್ಷ್ಮೀನರಸಿಂಹಸ್ವಾಮಿಯ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂಜಾ ಕಾರ್ಯಗಳು ಯಾವ ಊರು, ಮನೆಗಳಲ್ಲಿ ಹೆಚ್ಚು ನಡೆಯುತ್ತವೆ. ಅಲ್ಲಿ ನೆಮ್ಮದಿ ಜತೆಗೆ ಜಾತ್ಯತೀತ ಮನೋಭಾವ ಬೆಳೆಯುತ್ತದೆ ಎಂದರು.
ಪೂಜಾರಿ ಕೆ.ಉಜ್ಜಿನಪ್ಪ ಮಾತನಾಡಿದರು. ಡಾ.ಟಿ. ದಿವ್ಯಶ್ರೀ, ಹಾಲು ಒಕ್ಕೂಟ ಸಂಘದ ಅಧ್ಯಕ್ಷ ಟಿ.ಪ್ರಸನ್ನಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್. ಮಾರುತಿ, ಸದಸ್ಯರಾದ ಮಂಜುಳಾ, ಬಿ.ಷಣ್ಮುಖಪ್ಪ, ಪೂಜಾರಿ ರೇವಣ್ಣ, ಕೆಇಬಿ ಬಿ.ಹನುಮಂತಪ್ಪ, ಗೌಡರರಂಗಸ್ವಾಮಿ, ಶಿಕ್ಷಕ ಕೆ.ದುರುಗಪ್ಪ, ನಿವೃತ್ತ ಅಧಿಕಾರಿ ಬಿ.ದೇವರಾಜ್, ಕೆಂಚಪ್ಪ, ಎಲ್.ತಿಪ್ಪೇಸ್ವಾಮಿ, ವೈ.ತಿಪ್ಪೇಸ್ವಾಮಿ, ಸೋಮಗುದ್ದು ದ್ಯಾಮಣ್ಣ, ಪಿ.ಡಿ.ರುದ್ರಮುನಿ, ಆರ್.ದೇವೇಂದ್ರಪ್ಪ, ಎಚ್.ಕೆ.ಸಿದ್ದೇಶ, ಎಚ್.ಕೆ.ಸ್ವಾಮಿ ಇದ್ದರು.