

ವಿಜಯವಾಣಿ ಸುದ್ದಿಜಾಲ ಬೈಂದೂರು
ಪುಣ್ಯ ಪ್ರವಚನಗಳು, ಭಜನಾ ಸಂಕೀರ್ತನೆಗಳು, ಉಪನ್ಯಾಸ, ಹರಿಕಥೆ, ಯಕ್ಷಗಾನಗಳಂತಹ ಧಾರ್ಮಿಕ ಚಿಂತನೆಗಳು ಮನುಷ್ಯನ ಮನಸ್ಸನ್ನು ಗಟ್ಟಿಗೊಳಿಸುತ್ತದೆ ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ ಅಭಿಪ್ರಾಯಪಟ್ಟರು.
ಉಪ್ಪುಂದದ ಶ್ರೀ ಉವಾಮಹೇಶ್ವರ ದೇವಸ್ಥಾನದಲ್ಲಿ ಗಣೇಶ ಚೌತಿಯ ಉತ್ಸವ ಅಂಗವಾಗಿ ಸಿದ್ದಮ್ಮ ವಾದಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಐದು ದಿನಗಳ ಕಾಲ ಟ್ರಸ್ಟ್ ಅಧ್ಯಕ್ಷ ಯು. ಸೀತಾರಾಮ ಶೆಟ್ಟಿ ಅವರು ನಡೆಸಿದ ಭಗವದ್ಗೀತಾ ಸಂಕೀರ್ತನೆ ಸವಾರೋಪ ಸವಾರಂಭದಲ್ಲಿ ವಾತನಾಡಿದರು.
ಸಾಹಿತಿ, ಜಾದೂಗಾರ ಓಂಗಣೇಶ್ ಕಾಮತ್ ವಾತನಾಡಿ, ಸೀತಾರಾಮ ಶೆಟ್ಟಿ ಅವರ ಅಗಾಧವಾದ ಜ್ಞಾನ ಸಂಪತ್ತು ಮುಂದಿನ ಪೀಳಿಗೆಗೆ ಉಳಿಯಲು ಶಾಶ್ವತವಾದ ಯೋಜನೆಗಳು ನಡೆಯಬೇಕು ಎಂದರು.
ಡಾ.ಯಡ್ತರೆ ಎಂ.ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು. ಚೌತಿ ಸಂಭ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುವಾನ ವಿತರಿಸಲಾಯಿತು. ಬೆಂಗಳೂರಿನ ನಿವೃತ್ತ ವಿಜ್ಞಾನಿ ಡಾ.ಆರ್.ಆರ್.ಕೊಂಗಾವಿ ಇದ್ದರು. ಟ್ರಸ್ಟ್ ಅಧ್ಯಕ್ಷ ಉಪ್ಪುಂದ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಯು.ರವಿರಾಜ್ ಶೆಟ್ಟಿ ವಂದಿಸಿದರು. ಗ್ರಾಪಂ ಸದಸ್ಯ ಎನ್.ದಿವಾಕರ ಶೆಟ್ಟಿ ನಿರೂಪಿಸಿದರು.