ಧಾರ್ಮಿಕ ಶಿಬಿರಗಳಿಂದ ಭಾರತೀಯ ಸಂಸ್ಕೃತಿಯ ಅರಿವು

udp-kaniyur sri
Published on

ಉಡುಪಿ: ಹೆಚ್ಚಿನ ಮಕ್ಕಳು ಪಾಶ್ಚಿಮಾತ್ಯ ಸಂಸ್ಕಾರಗಳನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಧಾರ್ಮಿಕ ಶಿಬಿರಗಳ ಆಯೋಜನೆಯಿಂದ ಭಾರತೀಯ ಸಂಸ್ಕೃತಿ ಪರಿಚಯಿಸಲು ಸಾಧ್ಯ. ಇದರಿಂದ ಹಿಂದೂ ಧರ್ಮದ ಆಚಾರ ವಿಚಾರ, ಸಂಸ್ಕಾರಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ. ಮನೆಯ ಹಿರಿಯರು ಮಕ್ಕಳನ್ನು ಇಂಥ ಶಿಬಿರಗಳಿಗೆ ಕಳುಹಿಸಿ ಭವಿಷ್ಯದಲ್ಲಿ ಉತ್ತಮ ಸಂಸ್ಕಾರಯುತ ಸಮಾಜ ಬೆಳೆಸುವಲ್ಲಿ ಕೈಜೋಡಿಸಬೇಕು ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಶ್ರಯದಲ್ಲಿ ಮತ್ತು ಗಿರಿಬಳಗ ವತಿಯಿಂದ ಆಯೋಜಿಸಿರುವ 8 ದಿನಗಳ ವಸಂತ ಧಾರ್ಮಿಕ ಬೇಸಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ವಿಹಿಂಪ ಜಿಲ್ಲಾ ಸೇವಾ ಪ್ರಮುಖ್​ ವಿಖ್ಯಾತ್​ ಭಟ್​ ಮೂಡುಬೆಳ್ಳೆ , ಅದಮಾರು ಮಠದ ಅಧಿಕಾರಿ ನಾಗರಾಜ ರಾವ್​ ಮುಖ್ಯ ಅಥಿತಿಗಳಾಗಿದ್ದರು. ಲೇಖಕರಾದ ಓಂಪ್ರಕಾಶ ಭಟ್​, ಗಿರಿಬಳಗ ಅಧ್ಯಕ್ಷ ನವೀನ್​ ಕುಮಾರ್​ ಉಪಸ್ಥಿತರಿದ್ದರು. ಅರ್ಚಕ ವಿದ್ವಾನ್​ ರಾಘವೇಂದ್ರ ಭಟ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net