

ಮಂಡ್ಯ: ತಾಲೂಕಿನ ಹೊಳಲು ಗ್ರಾಮದ ಚಿತ್ತಾನಹಳ್ಳಿ ಪಟ್ಟಲದಮ್ಮ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅರಳಿಕಟ್ಟೆ ಮತ್ತು ನಾಗರಕಟ್ಟೆ ರಾಜಗೋಪುರ ಹಾಗೂ 52 ದೇವತೆಗಳ ಶಕ್ತಿಪೀಠ, ಸುಖನಾಶಿ, ಬಲಿಪೀಠ, ಗುರುಡಕಂಬ, ದೀಪಕಂಬ, ಅಮ್ಮನವರ ಪಾದುಕೆ, ಕಂಚಿನತ್ರಿಶೂಲ, ಮಹಾದ್ವಾರ, ಕಲ್ಲಿನ ಜೋಡಿ, ಆನೆಗಳ ಪ್ರತಿಮೆ, ವಿಮಾನ ಗೋಪುರದ ಕಳಸ ಪ್ರತಿಷ್ಠಾಪನಾ ಸಮಾರಂಭವು ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದೇವರಲ್ಲಿ ಭಕ್ತಿ, ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದರೆ ನಂಬಿಕೆ ಸಹಕಾರಗೊಳ್ಳುವುದು. ಮನಸ್ಸು ಪರಮಾತ್ಮನ ಕಡೆಯಿದ್ದಲ್ಲಿ ಈ ಬದುಕು ಹಸನವಾಗಿರುತ್ತದೆ. ಆಧ್ಯಾತ್ಮ ಧರ್ಮದ ಭಾವನೆಯನ್ನು ಬೆಳೆಸಿಕೊಂಡಲ್ಲಿ ಸಾಕ್ಷಾತ್ಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಪೆಕ್ಸ್ ಬ್ಯಾಂಕ್ ಸದಸ್ಯ ಅಶ್ವಥ್, ಚಿತ್ತಾನಹಳ್ಳಿ ದೇವಾಲಯದ ಗೌರವಾಧ್ಯಕ್ಷ ಎಚ್.ಎಲ್.ಶಿವಣ್ಣ, ಅಧ್ಯಕ್ಷ ಎಚ್.ಬಿ.ರಾಮು ಇತರರಿದ್ದರು.