

ಮಂಡ್ಯ: ತಾಲೂಕಿನ ತುಂಬಕೆರೆ ಗ್ರಾಮದಲ್ಲಿ ಜ.17, 18 ಮತ್ತು 19ರಂದು ಶಾಂತೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ವತಿಯಿಂದ ಶಾಂತೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಶಿಲಾ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ.
17ರಂದು ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ ಅನುಜ್ಞೆ, ಸ್ವಸ್ತಿವಾಚನ, ಅನಿರ್ವಾಣದೀಪ ಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ ಭಾಗವತ್ ಪುಣ್ಯಾಹ ನಡೆಯಲಿದೆ. 18ರಂದು ಸುಪ್ರಭಾತ ವೇದ ಪಾರಾಯಣ, ಧ್ವಾರ ತೋರಣಪೂಜೆ, ಯಾಗಶಾಲೆ ಪ್ರವೇಶ, ಅಂಕುರಾರ್ಪಣ 108 ಕಳಶಾರಾಧನೆ ನಡೆಯಲಿದೆ. 19ರಂದು ಬ್ರಾಹ್ಮೀ ಮಹೂರ್ತದಲ್ಲಿ ಪಿಂಡಿಕಾ ಪೂಜೆ, ದೇವರ ವಿಗ್ರಹಗಳು ಅಷ್ಟಾ ಬಂಧನ ಪ್ರತಿಷ್ಟೆ, ನಯನೋನ್ಮಿಲನ, ಸಂಗೀತ ಸೇವೆ, ಮಹಾನೈವೃದ್ಯ, ತೀರ್ಥ ಪ್ರಸಾದ ಹಾಗೂ ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ವೈದ್ಯನಾಥಪುರ ಕದಂಬ ಜಂಗಮ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.