

ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಮಾಜ ಪಾನ ಬಜಾರ ಟ್ರಸ್ಟ್ ವತಿಯಿಂದ ನಗರದ ಪಾನ ಬಜಾರನ ಶ್ರೀ ವಿಠ್ಠಲ ಹರಿಮಂದಿರದಲ್ಲಿ ಇತ್ತೀಚೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ದಿಂಡಿ ಉತ್ಸವ ಆಚರಿಸಲಾಯಿತು.
ವೆಂಕಟೇಶರಾವ ಪಿಸೆ ಅವರಿಂದ ಶ್ರೀ ಜ್ಞಾನೇಶ್ವರಿ ಪಾರಾಯಣ, ಶ್ರೀ ಯಶವಂತಬುವಾ ಪ್ರಭಾಕರಬುವಾ ಬೋಧಲೆ ಮಹಾರಾಜರಿಂದ ಕೀರ್ತನೆ ನಡೆಯಿತು .
ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪಾನ ಬಜಾರ ಘಟಕದ ಮಹಿಳಾ ಮಂಡಳದಿಂದ ಶ್ರೀ ಕೃಷ್ಣನ ತೊಟ್ಟಿಲೋತ್ಸವ ನೆರವೇರಿತು.
ಪಾನ ಬಜಾರದ ಶ್ರೀ ವಿಠ್ಠಲ ಹರಿಮಂದಿರದಿಂದ ಪ್ರಾರಂಭಗೊಂಡ ದಿಂಡಿ ಉತ್ಸವ ಜವಳಿಸಾಲ, ಬೆಳಗಾಂ ಗಲ್ಲಿ, ದುರ್ಗದಬೈಲ್, ಶ್ರೀ ದತ್ತಾತ್ರೇಯ ದೇವಸ್ಥಾನ, ತೊರವಿಗಲ್ಲಿ, ಇಟಗಿ ಶ್ರೀ ಮಾರುತಿ ದೇವಸ್ಥಾನ, ಬಾರದಾನ ಸಾಲ, ಸರಾಫ ಗಟ್ಟಿ ಮೂಲಕ ಸಾಗಿ, ಶ್ರೀ ವಿಠ್ಠಲ ಹರಿಮಂದಿರಕ್ಕೆ ವಾಪಸ್ಸಾಯಿತು. ಲಕ್ಷೇ ಶ್ವರದ ಗೋವಿದರಾವ ಮಾಂಡ್ರೆ ಮೆರವಣಿಗೆಯ ನೇತೃತ್ವ ವಹಿಸಿದ್ದರು.