

ಮಂಡ್ಯ: ತಾಲೂಕಿನ ಮುದ್ದುಂಗೆರೆ ಗ್ರಾಮದಲ್ಲಿ ಫೆ.6 ಮತ್ತು 7ರಂದು ಮುತ್ತುರಾಯಸ್ವಾಮಿ ದೇವಾಲಯದ ವಿಮಾನ ಗೋಪುರದ ಕಳಸ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ ಹಾಗೂ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಆಯೋಜಿಸಲಾಗಿದೆ ಎಂದು ನಗರಸಭಾ ಸದಸ್ಯ ಎಂ.ಪಿ.ಅರುಣ್‌ಕುಮಾರ್ ತಿಳಿಸಿದರು.
6ರಂದು ಸಂಜೆ 5ಗಂಟೆಗೆ ಗೋ ಪೂಜೆ, ಅನುಜ್ಞೆ ಮಹಾಸಂಕಲ್ಪ ಆರಾಧನೆ, ಅಗ್ನಿಪ್ರತಿಷ್ಠೆ, ವಾಸ್ತುಶಾಂತಿ, ವಾಸ್ತು ಹೋಮ, ರಾಕ್ಷೋಗ್ನ ಹೋಮ, ಲಘು ಪೂರ್ಣಾಹುತಿ ನವ ಅಧಿವಾಸಗಳ ಆರಾಧನೆ ಅಗ್ನಿ ಪ್ರತಿಷ್ಠೆ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
7ರಂದು ದ್ವಾದಶಿ ಪೂರ್ವಾಷಾಢ ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಸೇವೆ, ವೇದಪಾರಾಯಣ, ಗೋಪೂಜೆ ಪಿರವಾರ ದೇವತಾ ಹೋಮ, ಮಹಾ ಪೂರ್ಣಾಹುತಿ, ಬೆಳಗ್ಗೆ 11 ಗಂಟೆಗೆ ನಾರಾಯಣ ಭಜನ ಮಂಡಳಿಯಿಂದ ಭಜನೆಯೊಂದಿಗೆ ಮಧ್ಯಾಹ್ನ 1 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಹೇಳಿದರು.
ಆರ್ಯಈಡಿಗರ ಮಹಾಸಂಸ್ಥಾನದ ವಿಖ್ಯಾದಾನಂದಸ್ವಾಮೀಜಿ, ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಶಾಸಕ ರವಿಕುಮಾರ್ ಗಣಿಗ, ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಕೋಟಾ ಶ್ರೀನಿವಾಸ ಪೂಜಾರಿ, ಮದ್ದೂರು ಶಾಸಕ ಉದಯ್ ಕದಲೂರು, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಹರತಾಳು ಹಾಲಪ್ಪ, ಚಿತ್ರ ನಿರ್ಮಾಪಕ ಚಿನ್ನೇಗೌಡ, ಜೆ.ಪಿ ಗ್ರೂಪ್ಸ್‌ನ ಜೆ.ಪಿ.ಸುಧಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ದೇವಾಲಯ ಟ್ರಸ್ಟ್ ಅಧ್ಯಕ್ಷ ಎಂ.ಸಿ.ನಾರಾಯಣ್, ಗ್ರಾ.ಪಂ ಸದಸ್ಯ ಎಂ.ಕೃಷ್ಣ, ಸ್ವಾಮಿ, ವಸಂತ್ ಇದ್ದರು.