ಸಹಕಾರದಿಂದ ಧಾರ್ಮಿಕ ಆಚರಣೆ ಮಾದರಿ: ಹರಿಕೃಷ್ಣ ಪುನರೂರು ಹೇಳಿಕೆ

Kin_Sanmana
Published on

ಕಿನ್ನಿಗೋಳಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸರ್ವ ಧರ್ಮದ ಬಂಧುಗಳ ಸಹಕಾರದಿಂದ ನಡೆಯುತ್ತಿದ್ದು, ಮಾದರಿಯಾಗಿದೆ. ಕಿನ್ನಿಗೋಳಿಯಂಥ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಇಂತಹ ಕಾರ್ಯಕ್ರಮ ನಡೆಯಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸ್ವರ್ಣ ಸಂಭ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೋಂದಾ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೆರವೇರಿಸಿದರು. ಕಟೀಲು ದೇಗುಲದ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಮತ್ತು ಸುರಗಿರಿ ದೇವಸ್ಥಾನ ಅರ್ಚಕ ವಿಶ್ವೇಶ್ವರ ರಾವ್ ಆಶೀರ್ವಚನಗೈದರು. ಪೃಥ್ವೀರಾಜ್ ಆಚಾರ್ಯ, ಗಣೇಶ್ ಜಿ.ಬಂಗೇರ, ಭಾಸ್ಕರ ಶೆಣೈ, ಅಶೋಕ್ ಶೆಟ್ಟಿಗಾರ್, ಅಶ್ವಥ್ ರಾವ್ ಅವರನ್ನು ಸನ್ಮಾನಿಸಲಾಯಿತು. 50 ವರ್ಷಗಳಿಂದ ಅಧ್ಯಕ್ಷರಾಗಿದ್ದವರನ್ನು ಗೌರವಿಸಲಾಯಿತು.

ಡಾ.ಪ್ರಕಾಶ್ ನಂಬಿಯಾರ್, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಮೆಸ್ಕಾಂ ಅಧಿಕಾರಿ ಸುಧಾಕರ, ಹರೀಂದ್ರ ಸುವರ್ಣ, ಕುಶಲ ಪೂಜಾರಿ ಉಪಸ್ಥಿತರಿದ್ದರು. ಕೆ.ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ದಿವಾಕರ ಕರ್ಕೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net