

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಮೇಲೆ ಸಾಲ ಹೊರಿಸಿ ಮಂಡಿಸಿರುವುದು ರಾಷ್ಟ್ರೀಯ ಕಾಂಗ್ರೆಸ್ ಬಜೆಟ್ ಅಲ್ಲ, ಇದು ಓಲೈಕೆ ರಾಜಕಾರಣದ ಮುಸ್ಲಿಂ ಲೀಗ್ ಬಜೆಟ್ ಆಗಿದೆ. ಮತೀಯ ರಾಜಕಾರಣಕ್ಕೆ ಕುಮ್ಮಕ್ಕು ನೀಡುತ್ತಿರುವುದು ಭವಿಷ್ಯದಲ್ಲಿ ಅಪಾಯಕಾರಿ ಎಂದು ವಿಧಾನಪರಿಷತ್‌ನ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ಸರಳ ಮದುವೆಗೆ ಐವತ್ತು ಸಾವಿರ ರೂ.ನೀಡುವ ಕಾಂಗ್ರೆಸ್‌ಗೆ ವೋಟ್ ತೆಗೆದುಕೊಳ್ಳುವಾಗ ಹಿಂದುಗಳು ಬೇಕು. ಬೇರೆ ಜಾತಿಯಲ್ಲಿ ಬಡವರು ಯಾರು ಇಲ್ವಾ? ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್ ಬ್ಯಾಂಕ್‌ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಬಜೆಟ್ ಅಲ್ಲವೇ ಅಲ್ಲ. ಈ ಬಜೆಟ್ ಖಂಡಿಸಿ ಹೋರಾಟ ನಡೆಸಲು ಪಕ್ಷದಲ್ಲಿ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.
ಅನ್ ವಾಂಟೆಡ್ ಘಟನೆ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 2024 ಡಿಸೆಂಬರ್ 19ರಂದು ಅನ್ ವಾಂಟೆಡ್ ಘಟನೆ ನಡೆಯಿತು. ಇದರಲ್ಲಿ ಯಾರ ತಪ್ಪು, ಯಾರು ಸರಿ ಅಂತಾ ನಾನು ವಿಶ್ಲೇಷಣೆ ಮಾಡುವುದಿಲ್ಲ. ಈಗಾಗಲೇ ಕೇಸ್ ಕೋರ್ಟ್, ಎಥಿಕ್ಸ್ ಕಮಿಟಿ ಮುಂದಿದೆ. ಆ ಘಟನೆ ಸರಿ ತಪ್ಪುಗಳ ಬಗ್ಗೆ ನಾನು ವಿಶ್ಲೇಷಣೆಗೆ ಹೋಗುವುದಿಲ್ಲ. ಯಾರು ಏನೂ ತಪ್ಪು ಮಾಡಿದ್ದೀರಿ ಅವರ ಅಂತರಂಗಕ್ಕೆ ಗೊತ್ತು. ನನ್ನ ಅಂತರಂಗಕ್ಕೆ ನನ್ನ ಸರಿ ಏನು ತಪ್ಪು ಅಂತಾ ಗೊತ್ತು. ಹಾಗೇ ಉಳಿದವರು ಸಹ ಅವರ ಅಂತರಂಗವನ್ನ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ನಾನು ಕೂಡ ನನ್ನೊಳಗಿನ ದೋಷ ತಿದ್ದಿಕೊಳ್ಳುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಚ್ಚಾಡಿದರೇ ಪಕ್ಷಕ್ಕೆ ಉಳಿಗಾಲವಿಲ್ಲ
ಪೇಜಾವರ ಶ್ರೀಗಳ ಸ್ಮಾರಕ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ ಅಷ್ಟೇ. ಮುಂದೇ ಏನೂ ಆಗಿದೆ ಅನ್ನೋದು ನನಗೆ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಷಾಗೆ ದೂರು ಕೊಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ನಾವೆಲ್ಲರೂ ಪಕ್ಷದ ಕಾರ್ಯಕರ್ತರು. ನಾವಿನ್ನು ಜನಹಿತ ಆಧಾರಿಸಿ ಹೋರಾಟಕ್ಕೆ ಒತ್ತು ಕೊಟ್ಟರೆ ಮಾತ್ರ ಪಕ್ಷ ಗಟ್ಟಿಯಾಗಿ ಬೆಳೆಯುತ್ತದೆ. ಜನಹಿತ ಮರೆತು ವೈಯಕ್ತಿಕ ಸ್ವಾರ್ಥಕ್ಕೆ ಕಚ್ಚಾಡಿದರೇ ನಮಗೂ, ಪಕ್ಷಕ್ಕೂ ಉಳಿಗಾಲ ಇಲ್ಲ ಎಂದು ಎಂ ಎಲ್‌ಸಿ ಸಿ.ಟಿ.ರವಿ ಹೇಳಿದರು.
ಸಂಕಲ್ಪದಂತೆ ಯಲ್ಲಮ್ಮನ ಸನ್ನಿಗೆ ಬಂದು ಪೂಜೆ
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಹಿತಕರ ಘಟನೆ ಸಂದರ್ಭದಲ್ಲಿ ಪೊಲೀಸರು ರಾತ್ರಿಯಲ್ಲ ಸುತ್ತಾಡಿಸಿದ ಸಂದರ್ಭದಲ್ಲಿ ಮಧ್ಯರಾತ್ರಿ ಸವದತ್ತಿ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸವದತ್ತಿ ಯಲ್ಲಮ್ಮ ಬಳಿ ಸಂಕಲ್ಪ ಮಾಡಿದ್ದೆ. ಇವತ್ತು ಕುಟುಂಬ ಸಮೇತರಾಗಿ ಬಂದು ಹರಕೆ ತಿರಿಸಿದ್ದೇವೆ. ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಅವತ್ತು ನೂರಾರು ಜನರು ವಕೀಲರು ನೇರವಾಗಿ ನಮ್ಮ ಕೇಸ್ ಪರವಾಗಿ ವಕಾಲತ್ತು ವಹಿಸಿದ್ದರು. ವಕೀಲರಿಗೆ, ಕಾರ್ಯಕರ್ತರಿಗೆ, ಮಾಧ್ಯಮಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸುಧಾರಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕೆಲಸ ಎಂದು ಎಂಎಲ್‌ಸಿ ಸಿ.ಟಿ.ರವಿ ಹೇಳಿದರು.