ವರುಣತೀರ್ಥ ಕೆರೆಗೆ ಧಾರ್ಮಿಕ ಇತಿಹಾಸ

kota (3)
Published on

ಕೋಟ: ವರುಣತೀರ್ಥ ಕೆರೆಗೆ ಧಾರ್ಮಿಕ ಇತಿಹಾಸವಿದೆ. ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದೀಗ ಕೆರೆಯ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು, ಐದು ಸಾವಿರ ಮೀನುಗಳನ್ನು ಗಣೇಶೋತ್ಸವ ಸಮಿತಿ ವತಿಯಿಂದ ಬಿಟ್ಟಿರುವುದು ಖುಷಿಯ ವಿಚಾರ ಎಂದು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ ಸಿ.ಕುಂದರ್ ಹೇಳಿದರು.

ಕೋಟ ದೊಡ್ಡ ಗಣೇಶ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮ ಪ್ರಯುಕ್ತ ಜೀರ್ಣೋದ್ಧಾರಗೊಂಡ ಕೋಟ ವರುಣತೀರ್ಥ ಕೆರೆಗೆ ಐದು ಸಾವಿರ ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಿತಿ ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಉಪಾಧ್ಯಕ್ಷರಾದ ಕದ್ರಿಕಟ್ಟು ಚಂದ್ರ ಪೂಜಾರಿ, ಶೇವಧಿ ಸುರೇಶ್ ಗಾಣಿಗ, ಜಿ.ಎಸ್.ಆನಂದ್ ದೇವಾಡಿಗ, ಪಿಡಿಒ ಹರೀಶ್ ಶೆಟ್ಟಿ, ಅಮೃತೇಶ್ವರಿ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಶೆಟ್ಟಿ ಗಿಳಿಯಾರು, ಗಣೇಶ್ ನೆಲ್ಲಿಬೆಟ್ಟು, ಮಾಜಿ ಟ್ರಸ್ಟಿ ಸುಬ್ರಾಯ ಜೋಗಿ, ಸ್ಥಳೀಯರಾದ ವೆಂಕಟೇಶ ಪ್ರಭು, ರವೀಂದ್ರ ಐತಾಳ, ರಾಘವೇಂದ್ರ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಪಾಂಡು ಪೂಜಾರಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net