ಹಿಂದು ಸಮಾಜಕ್ಕೆ ಅಗತ್ಯ ಹನುಮ ಬಲ : ಯುವ ವಾಗ್ಮಿ ಹಾರಿಕಾ ಮಂಜುನಾಥ್ ಅಭಿಮತ

Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಮಹಾನ್ ಧರ್ಮ ಕಾರ್ಯವನ್ನು ಮಾಡಿದ ಭಗವಾನ್ ಹನುಮಂತನ ಸಂಘಟಿತ ಬಲ ಹಿಂದು ಸಮಾಜಕ್ಕೆ ಅಗತ್ಯವಿದೆ, ಪ್ರತಿ ಹಿಂದುವಿನ ಮನೆ-ಮನದಲ್ಲಿ ಧರ್ಮಜಾಗೃತಿಯ ಅವಶ್ಯಕತೆ ಇದೆ. ಪರಮ ಶ್ರೇಷ್ಠವಾದ ಹಿಂದು ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.

ಪುದು ಗ್ರಾಮದ ಫರಂಗಿಪೇಟೆ ವಿಜಯನಗರದ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾಪನಾ ವರ್ಧಂತಿ ಉತ್ಸವದ ಪ್ರಯುಕ್ತ ಭಾನುವಾರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಸಮಿತಿಯ ಅಧ್ಯಕ್ಷ ಧನರಾಜ್ ಶೆಟ್ಟಿ ತೇವು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನ ಹಿಂದು ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆಯಲಿ, ಸಮಾಜದ ಏಳಿಗೆಗೆ ಎಲ್ಲರೂ ಜತೆಗೂಡಿ ಕೆಲಸ ಮಾಡೋಣ ಎಂದು ಹೇಳಿ ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದರಿಗೆ ಧನ್ಯವಾದ ತಿಳಿಸಿದರು.

ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ.ರವೀಂದ್ರ ಕಂಬಳಿ ಸುಜೀರುಬೀಡು ಅವರನ್ನು ಸನ್ಮಾನಿಸಲಾಯಿತು. ಅರ್ಕುಳ ಶ್ರೀ ಉಳ್ಳಾಕ್ಲು ಮಗ್ನಂತಾಯಿ ಕ್ಷೇತ್ರದ ಧರ್ಮದರ್ಶಿ ವಜ್ರನಾಭ ಶೆಟ್ಟಿ ಅರ್ಕುಳಬೀಡು, ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಎಂ.ಮಹಾಬಲ ಕೊಟ್ಟಾರಿ, ಡಾ.ರವೀಶ್ ತುಂಗ, ಪುದು ಪಿಡಿಒ ಹರೀಶ್ ಕುಮಾರ್, ಉದ್ಯಮಿಗಳಾದ ಐತಪ್ಪ ಆಳ್ವ ಸುಜೀರು ಗುತ್ತು, ಅಜಿತ್ ಚೌಟ ದೇವಸ್ಯ, ಉಮೇಶ್ ಸಾಲಿಯಾನ್ ಬೆಂಜನಪದವು, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮಾತೃ ಸಮಿತಿ ಅಧ್ಯಕ್ಷೆ ಭುವನೇಶ್ವರಿ ಶೆಟ್ಟಿ ಕುಂಪನಮಜಲು ಇದ್ದರು. ಮನೋಜ್ ತುಪ್ಪೆಕಲ್ಲು ಸ್ವಾಗತಿಸಿ, ಸುರೇಶ ಶೆಟ್ಟಿ ಬರ್ಕೆ ವಂದಿಸಿದರು, ರಾಜೇಶ್ ಕೊಟ್ಟಾರಿ ಕಲ್ಲಡ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net