

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಟಿಪ್ಪು ಸರ್ಕಲ್‌ನಲ್ಲಿ ಈದ್ ಮಿಲಾದ್ ವೇಳೆ ಹಾಕಲಾಗಿದ್ದ ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಸಲಾಗಿತ್ತು. ಗಾಂಧಿ ಜಯಂತಿ ಅಂಗವಾಗಿ ಬುಧವಾರ ಟಿಪ್ಪು ವೃತ್ತಕ್ಕೆ ರಾಷ್ಟ್ರಧ್ವಜಗಳನ್ನು ಅಳವಡಿಸಲಾಗಿತ್ತು. ರಾಷ್ಟ್ರಧ್ವಜದ ಮೇಲೆ ಯÁವುದೇ ಧ್ವಜ ಇರಬಾರದು ಎಂಬ ನಿಯಮವಿದ್ದರೂ ನಿಯಮ ಪಾಲಿಸದೆ ಅಗೌರವ ತೋರಿದ ಆರೋಪ ಕೇಳಿಬಂದಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಬಜರಂಗ ದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಎಚ್ಚೆತ್ತುಕೊಂಡ ಕೆಲವರು ಧಾರ್ಮಿಕ ಧ್ವಜವನ್ನು ತೆರವು ಮಾಡಿದರು. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಬಜರಂಗ ದಳ ಕಾರ್ಯಕರ್ತರು ಆಗ್ರಹಿಸಿದರು.