ಧಾರ್ಮಿಕ ಭಾವನೆ ತರಲಿದೆ ನೆಮ್ಮದಿ

HLK BRAMMA 30
Published on

ಹೊಳಲ್ಕೆರೆ: ಧಾರ್ಮಿಕ ಆಚರಣೆ, ಭಾವನೆ, ನಂಬಿಕೆಗಳು ಜನರಲ್ಲಿ ನೆಮ್ಮದಿ ಜತೆಗೆ ಸಮಾಜದಲ್ಲಿ ಶಾಂತಿ ನೆಲೆಸಲು ಸಹಕಾರಿ ಆಗಲಿವೆ ಎಂದು ಬ್ರಹ್ಮಕುಮಾರಿ ಈಶ್ವರೀ ವಿವಿಯ ಮಹಾಲಕ್ಷ್ಮೀ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಸಂಸ್ಕಾರದಿಂದ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಧಾರ್ಮಿಕ ಸಂಸ್ಕಾರವನ್ನು ಕುಟುಂಬದಲ್ಲಿ ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈಶ್ವರೀ ವಿವಿಯ ಸಂಚಾಲಕಿ ಸುಮಿತ್ರಾ ಮಾತನಾಡಿ, ಪ್ರತಿಯೊಬ್ಬರಲ್ಲಿ ಸ್ನೇಹ-ಶಾಂತಿ ಬೆಳೆಸುವ ನಿಟ್ಟಿನಲ್ಲಿ ರಕ್ಷಾಬಂಧನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಹೋದರತ್ವ ರಕ್ಷಣೆ ಕುರಿತು ಸಂದೇಶವನ್ನು ನೀಡುವ ಮಹಾನ್ ಹಬ್ಬ ರಕ್ಷಾ ಬಂಧನ ಎಂದು ತಿಳಿಸಿದರು.

ಪಿಎಸ್‌ಐ ಸುರೇಶ್ ಮಾತನಾಡಿ, ಪ್ರತಿಯೊಬ್ಬರನ್ನು ರಕ್ಷಣೆ ಮಾಡುವ ರಕ್ಷಣೆ ಇಲಾಖೆಗೆ ಶಾಂತಿ ಸಂದೇಶಗಳು ಅಗತ್ಯವಾಗಿದೆ. ನಿತ್ಯವೂ ಸಮಾಜದ ಶಾಂತಿ ಕಾಪಾಡಲು ಸರ್ವರೂ ಕೈಜೋಡಿಬೇಕು ಎಂದರು.

ಮಲ್ಲಾಡಿಹಳ್ಳಿ ರಾಘವೇಂದ್ರ ಆಯುರ್ವೇದ ಕಾಲೇಜಿನ ಡಾ.ರಾಜಶೇಖರ್ ಮಾತನಾಡಿ, ರಕ್ಷಾಬಂಧನ ಎನ್ನುವುದು ಭಾರತೀಯ ಸಂಸ್ಕೃತಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎನ್.ಶಿವಮೂರ್ತಿ, ಪುರಸಭೆಯ ಸದಸ್ಯರಾದ ಬಿ.ಎಸ್.ರುದ್ರಪ್ಪ, ಜಯಪ್ಪ, ನಿಂಗಪ್ಪ, ರುದ್ರಪ್ಪ, ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ವಕೀಲ ಎಸ್.ವೇದಮೂರ್ತಿ, ಮುಖಂಡರಾದ ಸುನಿಲ್, ಕ್ಯಾತಪ್ಪ, ಜಾದು ಮೋಹನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net