ಮೇ.9ರಿಂದ 15ರವರೆಗೆ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ: ಗ್ರಾಮದ ಮುಖಂಡ ಶಿವಕುಮಾರ್ ಮಾಹಿತಿ

Religious event at Upparakanahalli mandya
Published on

ಮಂಡ್ಯ: ತಾಲೂಕಿನ ಕೆರಗೋಡು ಹೋಬಳಿ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ಮೇ.9ರಿಂದ 15ರವರೆಗೆ ಜೋಡಿ ನಂದಿ ಬಸವೇಶ್ವರ ವಿಗ್ರಹ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಮತ್ತು ಭಾರೀ ಧನಗಳ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಮುಖಂಡ ಶಿವಕುಮಾರ್ ತಿಳಿಸಿದರು.

9ರಂದು ಸಂಜೆ 6 ಗಂಟೆಗೆ ಮೀಸಲು ನೀರು, ಗಂಗಾಪೂಜೆ, ಗಣಪತಿ ಪೂಜೆ, ಗಂಗಾ ಸಹಿತ ಶೋಭಾ ಯಾತ್ರೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ. 10ರಂದು ಪಂಚ ವಾಸ್ತು ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪಂಚ ವಾಸ್ತು ಹೋಮ, ಉಪಚಾರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಲ ದಿನದ ಹಿಂದೆ ಕಿಡಿಗೇಡಿಗಳು ಜೋಡಿ ಎತ್ತುಗಳನ್ನು ಸಾಯಿಸಿ ಅರಣ್ಯಕ್ಕೆ ತಂದು ಬಿಸಾಡಿಹೋಗಿದ್ದು, ಗ್ರಾಮಸ್ಥರು ಈ ಜೋಡಿ ಎತ್ತುಗಳ ಅಂತ್ಯಕ್ರಿಯೆ ನಡೆಸಿ ದೇವಸ್ಥಾನ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದರು. ಅಂತೆಯೇ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಈ ಹಿಂದೆ ಭೂಮಿ ಪೂಜೆ ನೆರವೇರಿಸಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನ ಉದ್ಘಾಟನೆಯಾಗುತ್ತಿದ್ದು, ಎಲ್ಲರೂ ಜೋಡಿ ಎತ್ತುಗಳೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಮುಖಂಡರಾದ ಶಿವಕುಮಾರ್ ಆರಾಧ್ಯ, ಮಹೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net