ಸಮುದಾಯ ಭವನ ಅನುದಾನಕ್ಕಾಗಿ ಪ್ರಯತ್ನ : ಮಿಥುನ್ ಎಂ.ರೈ ಭರವಸೆ

New Project (18)
Published on

ಹಳೆಯಂಗಡಿ: ರಾಜ್ಯಕ್ಕೆ ದಕ್ಷ ಮುಖ್ಯಮಂತ್ರಿಯನ್ನು ನೀಡಿದ ದೇವಾಡಿಗ ಸಮುದಾಯಕ್ಕೆ ಅನುಕೂಲವಾಗುವಂತೆ ನಿರ್ಮಿಸುತ್ತಿರುವ ಸಮುದಾಯ ಭವನಕ್ಕಾಗಿ ಸರ್ಕಾರದ ಹಂತದಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಸರ್ಕಾರದ ಅನುದಾನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ.ರೈ ನುಡಿದರು.

ಹಳೆಯಂಗಡಿ ಪಾವಂಜೆ ದೇವಾಡಿಗ ಸಂಘದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಎಚ್.ವಸಂತ ಬರ್ನಾಡ್, ಸ್ಥಳೀಯ ನಾಯಕರಾದ ಯಾದವ ದೇವಾಡಿಗ, ಜನಾರ್ದನ ಪಡುಪಣಂಬೂರು, ರಾಮದಾಸ ಪಾವಂಜೆ, ಭಾಸ್ಕರ್ ಅರಂದು, ರಮೇಶ್ ಕುಮಾರ್ ದೇವಾಡಿಗ ತೋಕುರು ಮೊದಲಾದವರು ಇದ್ದರು. ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net