ಧಾರ್ಮಿಕದೊಂದಿಗೆ ಶೈಕ್ಷಣಿಕ ಬೆಳವಣಿಗೆ ಅಗತ್ಯ

24-10.MDL.01
Published on

ಮುದಗಲ್: ದೇಹ ಮತ್ತು ಮನಸ್ಸು ಸ್ಥಿಮಿತವಾಗಿರಲು ಹಾಗೂ ಉತ್ತಮ ನಡುವಳಿಕೆಗೆ ಧಾರ್ಮಿಕ ನಂಬಿಕೆ ಅವಶ್ಯ ಎಂದು ಯಾದಗಿರಿ ಜಿಪಂ ಸಿಇಒ ಅಮರೇಶ ನಾಯ್ಕ ಹೇಳಿದರು.

ಪೂಜಾರಿ ತಾಂಡದಲ್ಲಿ ದುರ್ಗಾದೇವಿ ದೇವಸ್ಥಾನ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಧಾರ್ಮಿಕ ಆಚರಣೆಯೊಂದಿಗೆ ಶೈಕ್ಷಣಿಕವಾಗಿ ಬೆಳವಣಿಗೆಯಾಗುವ ಮೂಲಕ ಬಂಜಾರ ಸಮುದಾಯದ ಯುವಕರು ಉತ್ತಮ ನಾಯಕರಾಗಬೇಕಾಗಿದೆ ಎಂದರು. ಆದಿಶಕ್ತಿ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಪೂಜೆಗಳು ನಡೆದವು. ಆಶಿಹಾಳ ತಾಂಡ, ಪೂಜಾರಿ ತಾಂಡ, ಬಯ್ಯಪುರ ತಾಂಡ, ಖೈರವಾಡಗಿ ತಾಂಡಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net