ಧಾರ್ಮಿಕ ಶ್ರದ್ಧೆಗೆ ಎಂದೂ ಗೌರವವಿದೆ

23 ckm 7
ಚಿಕ್ಕಮಗಳೂರು ಕೆಂಪನಹಳ್ಳಿಯಲ್ಲಿರುವ ಕಲ್ಕಟ್ಟೆ ಪುಸ್ತಕ ಮನೆಯಲ್ಲಿ ಶೃಂಗೇರಿಯ ಪುರೋಹಿತ ನಂದಕುಮಾರ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾ ನೀನಾಸಂ, ರೇಖಾ ನಾಗರಾಜರಾವ್, ವೈಷ್ಣವಿ ಎನ್ ರಾವ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಎಲ್ಲರಿಗೂ ಒಳಿತನ್ನೇ ಬಯಸುತ್ತಾ, ನಮ್ಮ ಅಂತರAಗದ ಔನ್ನತ್ಯವನ್ನು ಬಯಸುವ ಹಾಗೆಯೇ ಅಧ್ಯಾತ್ಮ ಸಾಧನೆಗೆ ಪ್ರೇರಣೆ ನೀಡುವ ಧಾರ್ಮಿಕ ಬದುಕಿಗೆ ಎಂದೂ ಗೌರವವಿದೆ ಎಂದು ಶೃಂಗೇರಿಯ ಪುರೋಹಿತರಾದ ನಂದಕುಮಾರ ಭಟ್ ತಿಳಿಸಿದರು.

ನಗರದ ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸನ್ಮಾರ್ಗದಲ್ಲಿರುವವರಿಗೆ ಎಂದೂ ಭಯವಿರುವುದಿಲ್ಲ. ನಮ್ಮ ಸ್ವಾರ್ಥಕ್ಕಾಗಿ ಇತರರಿಗೆ ತೊಂದರೆ ಕೊಡುವವರಿಗೆ ನೆಮ್ಮದಿ ಇರುವುದಿಲ್ಲ. ಧಾರ್ಮಿಕತೆಯು ಎಂದಿಗೂ ಲೋಕಾ ಸಮಸ್ತಾ ಸುಖಿನೋ ಭವಂತು ಎನ್ನುವ ಮನೋಭೂಮಿಕೆ ಹೊಂದಿರುವುದರಿAದ ಇಲ್ಲಿ ಯಾವ ಭಯವೂ ನಮ್ಮನ್ನು ಕಾಡುವುದಿಲ್ಲ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಂಗ ನಿರ್ದೇಶಕಿ ಪ್ರತಿಭಾ ನೀನಾಸಂ, ಭಾರತ ಧರ್ಮಭೂಮಿ ಮತ್ತು ಕರ್ಮಭೂಮಿ ಎಂದು ಸಾವಿರಾರು ವರ್ಷಗಳಿಂದ ಗುರುತಿಸಿಕೊಂಡಿದೆ. ಧಾರ್ಮಿಕ ಆಚರಣೆಗಳು ನಮ್ಮನ್ನು ಸಹನಾಶೀಲರನ್ನಾಗಿಸುತ್ತದೆ ಎಂದರು.
ಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲೂ ಪುರೋಹಿತ ವೃತ್ತಿಯು ನಂದಕುಮಾರ್ ಭಟ್‌ರಂಥ ಶ್ರದ್ಧಾವಂತ ವೈದಿಕರಿಂದ ಗೌರವವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವುದು ಗಮನೀಯ ಎಂದರು.
ಶಿಕ್ಷಕಿ ಸುನೀತಾ, ಪ್ರಮುಖರಾದ ಸುಶೀಲಮ್ಮ, ಕೇದಾರ್, ದರ್ಶನ್, ವೈಷ್ಣವಿ ಎನ್ ರಾವ್, ನಾಗರಾಜರಾವ್ ಕಲ್ಕಟ್ಟೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net