

ಕಾನಹೊಸಹಳ್ಳಿ: ಪುರಾಣ ಪ್ರವಚನ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಂತನೆಗಳ ಕಾರ್ಯಕ್ರಮ ಆಯೋಜನೆಯಿಂದ ದುಡಿವ ವರ್ಗದ ಜನರಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಕಾನಮಡುಗು ಬಸವರಾಜಪ್ಪ ನುಡಿದರು.
ಇದನ್ನೂ ಓದಿ: ಧಾರ್ಮಿಕ ಕಾರ್ಯಗಳಿಂದ ಅಧ್ಯಾತ್ಮ ಶಕ್ತಿ ವೃದ್ಧಿ
ಸಮೀಪದ ಭೀಮಸಮುದ್ರ ಗ್ರಾಮದ ಅರಾಧ್ಯ ಶಕ್ತಿ ದೇವತೆ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಶರನ್ನವರಾತ್ರಿ ನಿಮಿತ್ತ ಭಾನುವಾರ ರಾತ್ರಿ ಆಯೋಜಿಸಿದ್ದ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ನವರಾತ್ರಿ ಸಡಗರದಿಂದ್ದ ಕೂಡಿರುತ್ತಿತ್ತು, ಆದರೆ, ಈ ವರ್ಷ ರೈತಾಪಿ ವರ್ಗ ಬರಗಾಲದಿಂದ ತೀರ ಸಂಕಷ್ಟ ಪರಿಸ್ಥಿತಿಯಲ್ಲಿದೆ. ರೈತರ ಮನದಲ್ಲಿರುವ ನೋವು ನಿವಾರಣೆ ಮಾಡಿಕೊಳ್ಳಲು ಪುರಾಣ ಪ್ರವಚನಗಳದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಧ್ಯಾತ್ಮ ಚಿಂತನೆಗಳು ಕೇಳುವ ಮೂಲಕ ಮನಸ್ಸು ನೆಮ್ಮದಿಯಾಗಿಸಿಕೊಳ್ಳಬೇಕೆಂದರು.
ಪ್ರವಚನ ಒಂಬತ್ತು ದಿನಗಳ ಕಾಲ ಜರುಗಲಿದ್ದು ಗ್ರಾಮದ ಜನರು ವರ್ಗಬೇಧ ಮರೆತು ಸಮೂಹಿಕವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಮಾತಾ ಶ್ರೀ ಅನ್ನಪೂರ್ಣೇಶ್ವರಿ ದೇವಿ ಭಕ್ತರಿಂದ ವಿಶೇಷ ಪೂಜಾ ಕಾರ್ಯಗಳು ಜರುಗಿದವು.
ಯು.ಜಂಬಣ್ಣ, ನಡುಗುತ್ತಿ ಚಂದ್ರಶೇಖರ, ಎನ್.ಮರುಳಸಿದ್ದಪ್ಪ, ವೀರಗಾಸೆ ಕಲಾವಿದ ಯು.ರಾಜಪ್ಪ ಪುರಾಣ ಪ್ರವಚನ ಮಾಡಿದರು. ಬಿ.ಎಂ.ಸಿದ್ದಲಿಂಗಸ್ವಾಮಿ, ಬಿ.ಜಿ.ಹೇಮದ್ರಿಗೌಡ, ತಬಕನಹಳ್ಳಿ ಹೇಮಣ್ಣ, ಕೆ.ಶಂಕ್ರಪ್ಪ, ಅರ್ಚಕ ಕೆ.ಮಹೇಶ್ ಇದ್ದರು.