ಶ್ರೀನಿವಾಸ ಕಲ್ಯಾಣೋತ್ಸವದಿಂದ ಧಾರ್ಮಿಕ ಪ್ರಜ್ಞೆ

CHAPPARA MUHURTHA
ಏ.1ರಿಂದ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಂ.ಸಿ ಚಂದ್ರಶೇಖರ್, ಸತ್ಯನಾರಾಯಣ ಚಡಗ, ಪ್ರತಾಪ್ ಶೆಟ್ಟಿ, ಸುಲತಾ ಹೆಗ್ಡೆ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಕೋಟ

ಶ್ರೀನಿವಾಸ ಕಲ್ಯಾಣೋತ್ಸವ ಈ ಭಾಗದ ಬಹುದೊಡ್ಡ ಉತ್ಸವವಾಗಿ ಮೂಡಿಬರಲಿ. ಆ ಮೂಲಕ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಜಾತಗೊಳ್ಳಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಾಸ್ತಾನದ ಕಾರ್ತಿಕ್ ಎಸ್ಟೇಟ್‌ನಲ್ಲಿ ಏ.1ರಿಂದ ಆರಂಭಗೊಳ್ಳಲಿರುವ ಸಾರ್ವಜನಿಕ ಕಲ್ಯಾಣೋತ್ಸವದ ಚಪ್ಪರ ಮುಹೂರ್ತದಲ್ಲಿ ಮಾತನಾಡಿದರು.

ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್, ಸಮಿತಿ ಕೋಶಾಧಿಕಾರಿ ಸತ್ಯನಾರಾಯಣ ಚಡಗ, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಮುಖರಾದ ಸುಲತಾ ಹೆಗ್ಡೆ, ಜ್ಯೋತಿ ಉದಯ್ ಕುಮಾರ್, ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ಗಣೇಶ್ ಪೂಜಾರಿ, ಮಲ್ಲಿಕಾ ಬಾಲಕೃಷ್ಣ, ಪ್ರಭಾಕರ್ ಮೆಂಡನ್,ದೇವದಾಸ್ ಸಾಲಿಯಾನ್, ಲಿಲಾವತಿ ಗಂಗಾಧರ್, ಪ್ರಶಾಂತ್ ಶೆಟ್ಟಿ, ವಿಜಯ ಪೂಜಾರಿ, ಜಯೇಂದ್ರ ಪೂಜಾರಿ, ಮನೋಹರ್ ಪೂಜಾರಿ, ಮನೋಜ್ ಕುಮಾರ್, ಸುಜಾತ ಬಾಯರಿ, ಸತೀಶ್ ಪೂಜಾರಿ, ಸುಬ್ರಾಯ ಆಚಾರ್, ಶಂಕರ್ ಪೂಜಾರಿ ಪಾತ್ರಿಗಳು, ಗಣಪಯ್ಯ ಆಚಾರ್, ಕರುಣಾಕರ ಪೂಜಾರಿ, ಮಾಧವ ಕಾರ್ಕಡ, ಸಂದೀಪ ಕುಂದರ್ ಕೋಡಿ, ಸಿದ್ಧಿ ಶ್ರೀನಿವಾಸ ಪೂಜಾರಿ, ಜಯಂತಿ ಪೂಜಾರಿ ಉಪಸ್ಥಿತರಿದ್ದರು. ಸಮಿತಿ ಗೌರವ ಸಲಹೆಗಾರರಾದ ವಿಜಯ ಮಂಜರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಜಿ.ಚೆಲ್ಲಮಕ್ಕಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ತುಂಗ ಧಾರ್ಮಿಕ ವಿಧಿವಿಧಾನ ನೆರವೆರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net