ನಂಬಿಕೆ ಬಲಗೊಂಡಾಗ ನೆನೆದ ಕಾರ್ಯ ಸಿದ್ಧಿ : ಎಡನೀರು ಶ್ರೀ ಆಶೀರ್ವಚನ

3
Published on

ಬದಿಯಡ್ಕ: ನಂಬಿಕೆಗಳು ಬಲಗೊಂಡಾಗ ನೆನೆದ ಕಾರ್ಯಗಳು ಸಿದ್ಧಿಯಾಗುತ್ತವೆ. ದೇವರ ಹಾಗೂ ದೇವಸ್ಥಾನದ ಮೇಲಿನ ವಿಶ್ವಾಸ ದೃಢವಾಗಿರಬೇಕು. ಊರಿನ ಜನರ ಒಗ್ಗಟ್ಟಿನ ಸಹಕಾರವಿದ್ದರೆ ಧಾರ್ಮಿಕ ಕ್ಷೇತ್ರಗಳು ಪುನರುತ್ಥಾನಗೊಂಡು ಮತ್ತೆ ವೈಭವದತ್ತ ಸಾಗಲಿವೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಗುರುವಾರ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶಿವಶಕ್ತಿ ಪೆರಡಾಲ ಆಯೋಜಿಸಿದ ಶಿವಾರ್ಪಣಂ ನಿಧಿ ಕೂಪನನ್ನು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಶಿಧರ ಭಟ್ ಆನೆಮಜಲು ಬಿಡುಗಡೆಗೊಳಿಸಿದರು. ಉದನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಉದ್ಯಮಿ ಬಲರಾಮ್ ಆಚಾರ್ಯ ಪುತ್ತೂರು, ನ್ಯಾ.ಚಂದ್ರಶೇಖರ ರಾವ್ ಕೆ.ಎಸ್.ಕಾಸರಗೋಡು, ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್, ಕರ್ಣಾಟಕ ಬ್ಯಾಂಕ್ ಮಂಗಳೂರು ಮುಖ್ಯ ಪ್ರಬಂಧಕ ಶ್ರೀರಾಮ ಪ್ರಸಾದ ಮಾತೃಪ್ಪಾಡಿ, ಶಾಂತ ಕುಂಟಿನಿ, ಲಕ್ಷ್ಮೀನಾರಾಯಣ ನಾಯ್ಕ ಎಸ್., ದೈವಜ್ಞ ಶ್ರೀಕೃಷ್ಣಮೂರ್ತಿ ಪುದುಕೋಳಿ, ಶಿಕ್ಷಕಿ ಪ್ರಭಾವತಿ ಕೆದಿಲ್ಲಾಯ ಪುಂಡೂರು, ಜಯದೇವ ಖಂಡಿಗೆ, ಗೋಪಾಲ ಭಟ್ ಪಿ.ಎಸ್.ಪಟ್ಟಾಜೆ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲಗುತ್ತು ವಂದಿಸಿದರು. ಯುವಸಮಿತಿ ಅಧ್ಯಕ್ಷ ಡಾ.ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು. ನಿರಂಜನ್ ರೈ ಪೆರಡಾಲ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net