

ಕಳಸ: ಸನಾತನ ಧರ್ಮದಲ್ಲಿ ನಮ್ಮ ಕ್ಷೇತ್ರಗಳು ಯಾವುದೇ ಜಾತಿ ಬೇಧ ಮೇಲು-ಕೀಳು, ಬಡವ ಬಲ್ಲಿದ ಎನ್ನುವ ಬೇಧವಿಲ್ಲದೆ ನಮ್ಮ ಸಮಾಜ ಒಟ್ಟಾಗುವ ಕೇಂದ್ರ ಧಾರ್ಮಿಕ ಕೇಂದ್ರಗಳು ಕಾಸರಗೋಡಿನ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನದ ಶ್ರೀ ಎಡನೀರು ಮಠದ ಪೀಠಾಪತಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀಲಲಿತ ಕಲಾ ಮಂಟಪದಲ್ಲಿ ನಡೆದ ಶ್ರೀಶರನ್ನವರಾತ್ರಾ ಮಹೋತ್ಸವದ ಜೀವ-ಭಾವ ಸಮ್ಮೇಳನ ಹಾಗೂ ಶ್ರೀ ನವಗ್ರಹ ಹೋಮ ಮತ್ತು ಧರ್ಮಕರ್ತರ 34ನೇ ವರ್ಷದ ಪಟ್ಟಾಭಿಷೇಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಮಾತನಾಡಿ, ಯಾವುದೇ ಒಂದು ಕ್ಷೇತ್ರ ಅದಕ್ಕೆ ತನ್ನದೇ ಆದಂತಹ ತಾಯಿ ಆಶೀರ್ವಾದ ಅನುಗ್ರಹ ಇರುತ್ತದೆ. ಇದರ ಜತೆಗೆ ಆ ಕ್ಷೇತ್ರಕ್ಕೆ ಮಂತವಾದ ನಾಯಕತ್ವ ಇರುತ್ತದೆ. ಯಾವ ಕೇತ್ರದಲ್ಲಿ ಪರಂಪರೆ ಹಾಗೂ ಅನುಗ್ರದ ಜತೆಗೆ ಧಾರ್ಮಿಕ ನಾಯಕತ್ವ ಎಲ್ಲಿ ಸಿಗುತ್ತೋ ಆ ಕ್ಷೇತ್ರ ಸಹಜವಾಗಿ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತದೆ. ಭೀಮೇಶ್ವರ ಜೋಷಿ ಕ್ಷೇತ್ರಕ್ಕೆ ನಾಯಕತ್ವ ಕೊಡುವುದರ ಜೊತೆಗೆ ಸಾಮಾಜಕ್ಕೂ ನಾಯಕತ್ವವನ್ನು ಕೊಟ್ಟಿದ್ದಾರೆ.ಸಂಸ್ಕಾರಯುತ ವ್ಯಕ್ತಿಗೆ ಜೀವ ಮಾತ್ರ ಮುಖ್ಯವಲ್ಲ ಭಾವ ಮಾತೃ ಹೃದಯ ಬೇಕು. ಕ್ಷೇತ್ರದ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೋ ಅವರಿಗೆ ಮಾತೃಹೃದಯ ಅಗತ್ಯ. ಅದನ್ನು ಈ ಕ್ಷೇತ್ರದಲ್ಲಿ ಕಾಣಬಹುದು ಎಂದು ಹೇಳಿದರು.
ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಉತ್ತರ ಭಾರತ ಪ್ರವಾಸ ಮಾಡಿದಾಗ ಅಲ್ಲಿ ನೋಡಿದ ಅನುಭವ ನನಗೆ ಈ ಜೀವ_ಭಾವ ಕಾರ್ಯಕ್ರಮ ಮಾಡಲು ಪ್ರೇರಣೆಯಾಯಿತು. ದೇಹದ ಹೊರಭಾಗವನ್ನು ನಾವು ಎಷ್ಟು ಶುದ್ಧವಾಗಿಟ್ಟುಕೊಳ್ಳುತ್ತೇವೇಯೋ ಹಾಗೆಯೇ ಅಂತರಂಗದ ಭಾವನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಯಾವತ್ತು ಭಾವ ಕೆಡುವಂತ ವ್ಯವಸ್ಥೆಗೆ ಕಾರಣವಾಗುತ್ತದೋ ಅದರಿಂದ ಬದುಕು ಕಷ್ಟ ಕಾರ್ಪಣ್ಯಕ್ಕೆ ಒಳಗಾಗುತ್ತದೆ. ಭಾವನಾತ್ಮಕವಾಗಿ ನಮ್ಮ ಬದುಕನ್ನು ಸೃಜನಶೀಲವನ್ನಾಗಿ ಮಾಡಿಕೊಳ್ಳಬೇಕು. ಅಂತರಂಗದ ಶುದ್ಧತೆಯಲ್ಲಿ ನಮ್ಮ ಜೀವನ ಸಾಗಬೇಕು ಎಂದು ಹೇಳಿದರು.