ದೇವಸ್ಥಾಗಳಲ್ಲಿ ಧಾರ್ಮಿಕ ಕೈಂಕರ್ಯ

15-pnp 1
ಪಾಂಡವಪುರ ಪಟ್ಟಣದ ಹಾರೋಹಳ್ಳಿಯಲ್ಲಿ ರೈತರು ರಾಸುಗಳಿಗೆ ಕಿಚ್ಚು ಹಾಯಿಸಿದರು.
Published on

ಪಾಂಡವಪುರ : ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು.


ಪಟ್ಟಣದ ಶ್ರೀ ಮಹಾಕಾಳೇಶ್ವರಿ, ಸುಬ್ರಹ್ಮಣೇಶ್ವರ, ಶನೇಶ್ಚರ, ಚಂದ್ರಮೌಳೇಶ್ವರ, ಶನೈಶ್ಚರ, ಆದಿಶಕ್ತಿ, ಅನ್ನಪೂರ್ಣೇಶ್ವರಿ ಹಾಗೂ ಗಣಪತಿ ದೇವಸ್ಥಾಗಳಲ್ಲಿ ಧಾರ್ಮಿಕ ಕೈಂಕರ್ಯ ಶಾಸ್ತ್ರೋಕ್ತವಾಗಿ ನಡೆಯಿತು. ಮುಂಜಾನೆ ಮುನ್ನ ದೇವಸ್ಥಾನವನ್ನು ಸ್ವಚ್ಛಗೊಳಿಸಿ ದೇವರ ವಿಗ್ರಹಗಳನ್ನು ಹೂವುಗಳಿಂದ ಆಲಂಕರಿಸಿ, ದೇವಸ್ಥಾನವನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತಾದಿಗಳು ದೇಗುಲಗಳಿಗೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.


ಹೆಣ್ಣಮಕ್ಕಳು ಹೊಸ ಬಟ್ಟೆ ನೆರಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಕಬ್ಬು ನೀಡಿ ಹಬ್ಬದ ಶುಭಾಶಯ ಕೋರಿದರು. ರೈತರು ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಇತ್ಯಾದಿಗಳನ್ನು ರಂಗು, ರಂಗ್ಗಿ ಬಣ್ಣಗಳಿಂದ ಶೃಂಗರಿಸಿ ಖುಷಿ ಪಡಿವ ಜತೆಗೆ ಬಣ್ಣದ ಕಾಗದಗಳು ಹಾಗೂ ಬಲೂನ್ ಗಳನ್ನು ಕೊಬ್ಬುಗಳಿಗೆ ಕಟ್ಟಿ ಕಿಚ್ಚು ಹಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net