

ಪರಮಾನಂದವಾಡಿ: ಜಗತ್ತಿನಲ್ಲಿ ಅಧರ್ಮ ತಾಂಡವವಾಡಿದಾಗ ದುಷ್ಟರನ್ನು ಸಂಹಾರ ಮಾಡುವುದು ಧರ್ಮ ಮತ್ತು ಸಷ್ಟಿಯ ನಿಯಮ ಎಂದು ಖೇಮಲಾಪುರದ ಅಭಿನವ ನಿಜಗುಣ ಸ್ವಾಮೀಜಿ ಹೇಳಿದರು.
ಸಮೀಪದ ಖೇಮಲಾಪುರ ಗ್ರಾಮದ ನಿರಾಭರಿ ಸದ್ಗುರು ಬಸವಾನಂದ ವೇದಿಕೆ ಸಿದ್ಧಾರೂಢ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸದ್ಗುರು ಬಸವಾನಂದ ಸ್ವಾಮೀಜಿ 19ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಧ್ಯಾತ್ಮ ಪ್ರವಚನ ಕಾರ್ಯಕ್ರಮ ಅಧ್ಯತೆ ವಹಿಸಿ ಮಾತನಾಡಿದರು. ಕೆಲ ಸ್ವಾಮಿಗಳು ಜಾತಿ&ಜಾತಿ, ಸ್ವಾಮಿ& ಸ್ವಾಮಿಗಳ ನಡುವೆ ಜಗಳ ಹಚ್ಚುತ್ತಿದ್ದು, ಅವರಿಂದ ದೂರವಿರಬೇಕು ಎಂದರು.
ಬಾಗಲಕೋಟೆಯ ರಾಮಾರೂಢ ಸ್ವಾಮೀಜಿ, ಸೊಲ್ಲಾಪುರದ ಶಿವಪುತ್ರ ಸ್ವಾಮೀಜಿ, ಐನಾಪುರದ ಬಸವೇಶ್ವರ ಸ್ವಾಮೀಜಿ, ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಕೋಳಿಗುಡ್ಡದ ಸ್ವರೂಪಾನಂದ ಸ್ವಾಮೀಜಿ, ಪಾಲಭಾವಿಯ ವೀರಯ್ಯ ಸ್ವಾಮೀಜಿ, ಹಿಪ್ಪರಗಿಯ ಸಿದ್ಧಾರೂಢ ಶರಣರು, ಶಕ್ತಿನಗರದ ಸದಾನಂದ ಮಹಾರಾಜರು, ನೀರಮಾನ್ವಿಯ ನರಸಣ್ಣ ಸಾಹುಕಾರರು, ಕಾಡಯ್ಯ ಸ್ವಾಮಿಗಳು, ಶಂಕರ ಶರಣರು, ಬಸವರಾಜ ಮೂಡಲಗಿ, ನಂದೇಶ್ವರ ಚಿಟ್ಟಿ, ಬಸವರಾಜ ಸನದಿ, ಅಶೋಕ ಗುಡೋಡಗಿ, ಪ್ರಭುಲಿಂಗ ಪಾಲಭಾವಿ, ಶ್ರೀಮಂತ ಕಾಂಬಳೆ, ಬಸವರಾಜ ಶರಣರು ಕಬಗಲ, ಮನೋಹರ ಮೂಡಲಗಿ, ಚಿದಾನಂದ ಗುಡೋಡಗಿ ಇತರರಿದ್ದರು.