ಧರ್ಮ ರಕ್ಷಣೆಗಾಗಿ ಪಣತೊಡಲಿ

16 HATTI 02
ಹಟ್ಟಿಚಿನ್ನದಗಣಿಯಲ್ಲಿ ಶ್ರೀ ರಾಮ ಸೇನೆಯಿಂದ ಆಯೋಜಿಸಿದ್ದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿದರು. ಜಿಲ್ಲಾ ಸಂಚಾಲಕ ರಾಜಚಂದ್ರ, ಜಿಲ್ಲಾಧ್ಯಕ್ಷ ಮಂಜುನಾಥ ಬಾವಿ, ಲಿಂಗಸುಗೂರು ತಾಲೂಕು ಅಧ್ಯಕ್ಷ ರಘುಗೌಡ ನಾಯಕ, ಹಟ್ಟಿಯ ರಾಜುರೆಡ್ಡಿ ಇತರರಿದ್ದರು.
Published on

ಹಟ್ಟಿಚಿನ್ನದಗಣಿ: ಹಿಂದುತ್ವ, ದೇಶ, ಧರ್ಮ ಹಾಗೂ ಹಿಂದುಗಳ ರಕ್ಷಣೆಗೆ ಶ್ರೀರಾಮ ಸೇನೆ ಪಣತೊಟ್ಟು ನಿಂತಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಪಟ್ಟಣದಲ್ಲಿ ಶ್ರೀರಾಮ ಸೇನೆ ಹಟ್ಟಿ ಘಟಕದಿಂದ ಆಯೋಜಿಸಿದ್ದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ದೇಶ ಹಿಂದು ರಾಷ್ಟ್ರವಾಗಬೇಕು. ಈ ದೇಶದಲ್ಲಿ ಹಿಂದುಗಳಿಗೆ ಯಾವುದೇ ರೀತಿಯ ಕಟ್ಟಪ್ಪಣೆ ಇರಬಾರದು. ಮತಾಂತರ, ಗೋಹತ್ಯೆ, ಲವ್ ಜಿಹಾದ್‌ಗೆ ಕಡಿವಾಣ ಹಾಕಬೇಕು. ವಕ್ಫ್ ಮಂಡಳಿಯಿಂದ ರೈತರ ಜಮೀನಿನ ಪಹಣಿಯಲ್ಲಿ ಬರುತ್ತಿರು ವಕ್ಫ್ ಹೆಸರನ್ನು ತೆಗೆದುಹಾಕಬೇಕು. ಹಿಂದು ರಾಷ್ಟ್ರ ನಿರ್ಮಾಣಕ್ಕೆ ಯುವ ಪೀಳಿಗೆ ಸಜ್ಜಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net