ಧರ್ಮ, ಪರಿಸರ ಜಾಗೃತಿ ಕಾರ್ಯಕ್ರಮ ಆ.13 ರಂದು

chidanandayya guruvin
ಚಿದಾನಂದಯ್ಯ ಗುರುವಿನ್
Published on

ಸಿಂಧನೂರು: ಶ್ರಾವಣಮಾಸ ಅಂಗವಾಗಿ ನಗರದ ಸುಕಾಲಪೇಟೆಯ ನಂಜುಂಡಯ್ಯ ಗುರುವಿನ್ ಮಠದಲ್ಲಿ ಆ.13 ರಂದು ಹಾಲುಮತ ಸಮಾಜದಿಂದ ಧರ್ಮ, ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅನುಭಾವಿ, ಗುಂಡ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಚಿದಾನಂದಯ್ಯ ಗುರುವಿನ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನಕಗುರು ಪೀಠದ ಶ್ರೀಗಳ ಮಹತ್ವದ ಕಲ್ಪನೆಯಾಗಿದೆ. ಶಿಕ್ಷಣ, ಸಂಸ್ಕಾರ ಮತ್ತು ಪರಿಸರ ಕಾಳಜಿ ಜನರಲ್ಲಿ ಹೆಚ್ಚಬೇಕಿದೆ. ಅಂದು ಬೆಳಗ್ಗೆ ಕನಕಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕನಕದಾಸ ವೃತ್ತದಿಂದ ನಂಜುಂಡಯ್ಯ ಗುರುವಿನ್ ಮಠದವರೆಗೆ ಬೈಕ್ ರ‌್ಯಾಲಿ ನಡೆಯಲಿದೆ.

ನಂತರ ಧರ್ಮ, ಪರಿಸರ ಜಾಗೃತಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು. ಆ.15 ರಂದು ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಿಸಲಿದ್ದು, ಅಂದು ಶ್ರೀ ಗಣೇಶ ದೇವಸ್ಥಾನದಿಂದ ಶ್ರೀ ಕನಕದಾಸ ವೃತ್ತದವರೆಗೆ ಶೋಭಾ ಯಾತ್ರೆ ನಡೆಸಲಾಗುವುದು. ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.

ಕುರುಬರ ಸಂಘದ ತಾಲೂಕು ಅಧ್ಯಕ್ಷ ಕೆ.ಭೀಮಣ್ಣ ವಕೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಅಮರಪ್ಪ ಮೈಲಾರ, ಸುರೇಶ ಹಚ್ಚೊಳ್ಳಿ, ಶಿವು ಸುಕಾಲಪೇಟೆ, ಗ್ಯಾನಪ್ಪ ಸತ್ಯಂಪೇಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net