ಧರ್ಮ-ರಾಜಕೀಯ ಬೇರೆಯಾಗಿಯೇ ಇರಬೇಕು: ರಂಭಾಪುರಿ ಶ್ರೀ ಅಭಿಮತ

rambapuri shree
rambapuri shree
Published on

ಚಿತ್ರದುರ್ಗ: ಧರ್ಮ-ರಾಜಕೀಯ ಯಾವತ್ತು ಬೇರೆಯಾಗಿಯೇ ಇರಬೇಕೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಜಗದ್ಗುರು ಮರುಳು ಸಿದ್ದೇಶ್ವರ ಮಠದಿಂದ ಗುರುವಾರ ಆಯೋಜಿಸಿದ್ದ ಮಹಾಶಿವರಾತ್ರಿ ಜಾತ್ರೆ ಹಾಗೂ ನೂತನ ಬ್ರಹ್ಮರಥೋತ್ಸವ ಉದ್ಘಾ ಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಧರ್ಮದಲ್ಲಿ ರಾಜಕೀಯ ಬೆರೆಯಬಾರದೆಂಬ ಮಾತು ಬಹು ಹಿಂದಿನಿಂದಲೂ ಇದೆ. ಅದೇ ರೀತಿ ಮಠಾಧೀಶರು ಧರ್ಮದಲ್ಲಿ ರಾಜಕೀಯದಿಂದ ದೂರವುಳಿದು ಧರ್ಮದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈ ಮಾತಿಗೆ ಅಪವಾದವೆಂಬಂತೆ ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳೆಂಬಂತೆ ಕೆಲಸ ಮಾಡುತ್ತಿವೆ. ಇದು ಸರಿಯಾದ ಕ್ರಮವಲ್ಲ ಎಂದರು.

ಧರ್ಮದಲ್ಲಿ ರಾಜಕೀಯ ಬೆರೆಯುತ್ತಿರುವುದರಿಂದಾಗಿ ಧರ್ಮ, ಸಂಸ್ಕೃತಿಗಳು ಕಲುಷಿತಗೊಂಡು ಜನರ ಭಾವನೆಗಳೇ ವಿಚಿತ್ರವಾಗುತ್ತಿವೆ ಎಂದು ಶ್ರೀಗಳ ಆತಂಕ ವ್ಯಕ್ತಪಡಿಸಿದರು. ಕಲ್ಲೇನಹಳ್ಳಿ ಶ್ರೀ ಜಗದ್ಗುರು ಮರುಳು ಸಿದ್ದೇಶ್ವರ ಶ್ರೀಮಠದಲ್ಲಿ ಭಸ್ಮ ತಯಾರಿಕಾ ಘಟಕವನ್ನು ಪ್ರಾರಂಭಿಸುವುದಾದರೆ ಶ್ರೀ ರಂಭಾ ಪುರಿ ಪೀಠ ಒಂದು ಲಕ್ಷ ರೂ.ಕೊಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net