‘ಅನುಗ್ರಹ’ ಯೋಜನೆಯಲ್ಲಿ ಪರಿಹಾರ

anugraha
Published on

ಮಂಗಳೂರು: ಆಕಸ್ಮಿಕ ಮರಣ ಹೊಂದಿದ ಆಡು ಮತ್ತು ಕುರಿಗಳಿಗೆ ಗರಿಷ್ಠ 5 ಸಾವಿರ ರೂ ಹಾಗೂ ದನ ಮತ್ತು ಎಮ್ಮೆಗಳಿಗೆ ಗರಿಷ್ಠ 10 ಸಾವಿರ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಅನುಗ್ರಹ ಯೋಜನೆಯಡಿ ಘೋಷಿಸಿದೆ. ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಿಸಿದ ನಂತರ ಯೋಜನೆಯ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು: ಮಂಗಳೂರು-9243306956, ಬಂಟ್ವಾಳ-9481445365, ಪುತ್ತೂರು-9448129708 ಬೆಳ್ತಂಗಡಿ- 9448533922, ಕಡಬ- 9483922594, ಮೂಡುಬಿದಿರೆ-8494897408, ಸುಳ್ಯ-9844995078, ಉಳ್ಳಾಲ-9019198507, ಮೂಲ್ಕಿ -8971024282 ಅವರನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net