ಬಜ್ಪೆಯಲ್ಲಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

New Project (35)
Published on

ಗುರುಪುರ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಮಾತೆಯ ಗೌರವಾರ್ಥ ಬಜ್ಪೆಯಲ್ಲಿ ಜನಮಂಗಳ ಕಾರ್ಯಕ್ರಮದಡಿ ಅಂಗವಿಕಲರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ಉಪಕರಣ ವಿತರಣಾ ಹಾಗೂ ಸಹಾಯಧನ ಕಾರ್ಯಕ್ರಮ ಬಜ್ಪೆಯಲ್ಲಿ ನಡೆಯಿತು.

ಬಜ್ಪೆ ಬ್ಯಾಂಕ್ ಆಫ್ ಬರೋಡಾದ ಶಾಖೆ ಪ್ರಬಂಧಕ ನಾಗವಾರ ಪ್ರಸಾದ್, ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ ಕೋಟ್ಯಾನ್, ಬಜ್ಪೆ ತಾಲೂಕು ಯೋಜನಾಧಿಕಾರಿ, ಕಚೇರಿ ಪ್ರಬಂಧಕ, ಸಿಬ್ಬಂದಿ ಉಪಸ್ಥಿತರಿದ್ದರು.

ಫಲಾನುಭವಿ ಭಿನ್ನ ಚೇತನ ವ್ಯಕ್ತಿಗಳಿಗೆ ವ್ಹೀಲ್ ಚೇರ್, ವಾಕರ್ ಸ್ಟಿಕ್, ವಾಟರ್ ಬೆಡ್ ಮತ್ತಿತರ ಉಪಕರಣ ಹಾಗೂ ಪ್ರಕೃತಿ ವಿಕೋಪದಿಂದ ಮನೆ ಹಾನಿಗೀಡಾದ ಕುಟುಂಬಗಳಿಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ಸಹಾಯಧನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net