ರಿಲಾಯನ್ಸ್ ಸಂಸ್ಥೆಯಿದ ಗ್ರಾಮ ಸ್ವಯಂ ಸೇವಕರಿಗೆ ತರಬೇತಿ

2
Published on

ಕೃಷಿ ಪ್ರಧಾನವಾದ ಭಾರತವನ್ನು ಸಮೃದ್ಧಿಗೊಳಿಸಿ : ಓಂಪ್ರಕಾಶ
ಗದಗ: ಕೃಷಿ ಪ್ರಧಾನವಾದ ಭಾರತವನ್ನು ಇನ್ನಷ್ಟು ಸಮೃದ್ಧಗೊಳಿಸಲು ನಾವೆಲ್ಲರೂ ಕಂಕಣ್ಣಬದ್ಧರಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ರಿಲಾಯನ್ಸ್ ಫೌಂಡೇಶನ್‌ದ ರಾಜ್ಯ ತಾಂತ್ರಿಕ ಮುಖ್ಯಸ್ಥ ಓಂಪ್ರಕಾಶ ಪಾಟೀಲ ಹೇಳಿದರು.
ಅವರು ರೋಣ ಪರಿವೀಕ್ಷಣಾ ಮಂದಿರದಲ್ಲಿ ಗ್ರಾಮ ಸ್ವಯಂ ಸೇವಕರಿಗೆ ಗ್ರಾಮಾಭಿವೃದ್ಧಿ ಕುರಿತು ಎರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ರೈತಬಾಂಧವರಿಗೆ ಕೃಷಿಯ ಬಗ್ಗೆ ತಿಳುವಳಿಕೆ, ಸತ್ವಯುತವಾದ ಭೂಮಿಯಲ್ಲಿ ಫಲವತ್ತಾದ ಹೆಚ್ಚು ಫಸಲು ತೆಗೆಯುವ ಬಗೆ, ಮಣ್ಣಿನ ಗುಣಧರ್ಮ, ಭೌಗೋಳಿಕ ಮತ್ತು ಭೂವೈಜ್ಞಾನಿಕ, ಹವಾಮಾನ, ಮುನ್ಸೂಚನೆ, ಹವಾಮಾನ ವೈಪರಿತ್ಯಗಳು ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವದು ಅಗತ್ಯವಿದೆ.
ಈಗಾಗಲೇ ನಮ್ಮ ರೈತ ಬಾಂಧವರು ತಮ್ಮ ಜ್ಞಾನವನ್ನು ಉಪಯೋಗಿಸಿಕೊಂಡು ಕೃಷಿ ಸಾಧನೆ ಮಾಡುತ್ತಿದ್ದು ಅವರಿಗೆ ಇನ್ನಷ್ಟು ಸೂಕ್ತ ಮಾರ್ಗದರ್ಶನ ಮಾಡಿದಲ್ಲಿ ಅವರು ಕೃಷಿರಂಗದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಹೆಚ್ಚು ಫಸಲು, ಹೆಚ್ಚು ಲಾಭವನ್ನು ತರುವ ರೀತಿಯನ್ನು ಮನವರಿಕೆ ಮಾಡುವದು ಅಗತ್ಯವಿದೆ ಈ ಕಾರ್ಯಕ್ಕೆ ನಮ್ಮ ಗ್ರಾಮ ಸ್ವಯಂ ಸೇವಕರ ತಂಡ ಸನ್ನದ್ಧಗೊಳ್ಳಬೇಕಿದೆ ಎಂದರು.
ರಿಲಾಯನ್ಸ್ ಫೌಂಡೇಶನ್‌ದ ಪ್ರತಿನಿಧಿ ವಿಕ್ರಮ್ ನಿಂಬಾಳ್ ಅವರು ಯೋಜನೆಯ ಹಿನ್ನಲೆ, ತರಬೇತಿಯ ಉದ್ದೇಶಗಳನ್ನು ಸಾಧರಪಡಿಸಿ ಕೃಷಿಯೊಂದಿಗೆ ಗ್ರಾಮಾಭಿವೃದ್ಧಿಗೆ ಏನೆಲ್ಲಾ ಮಾಡಬಹುದು ಎಂಬುದನ್ನು ವಿವರಿಸಿ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತರಬೇತಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಕೃಷಿಯ ಮೇಲೆ ಅದರ ಪರಿಣಾಮಗಳನ್ನು ಕುರಿತು ವಿಚಾರಿಸಲಾಯಿತು. ಮುಖ್ಯವಾಗಿ, ಗ್ರಾಮ, ರಾಷ್ಟ್ರ, ಮತ್ತು ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು, ಜಲಾನಯನ ನಿರ್ವಹಣೆ, ಹವಾಮಾನ ಆಧಾರಿತ ಕೃಷಿ ಪದ್ಧತಿಗಳು ಮತ್ತು ಸಮಗ್ರ ನೀರು ನಿರ್ವಹಣೆ ಕುರಿತು ಚರ್ಚಿಸಲಾಯಿತು ಅಲ್ಲದೆ ಭೌಗೋಳಿಕ ಮತ್ತು ಭೂವೈಜ್ಞಾನಿಕ ವಿವರಗಳು, ಮಣ್ಣಿನ ಗುಣಲಕ್ಷಣಗಳು, ಹಾಗೂ ಯಲಿಶಿರೂರ್ ಕ್ಯಾಡಾಸ್ಟ್ರಲ್ ನಕ್ಷೆ ಮತ್ತು ಕೆಎಂಎಲ್ ನಕ್ಷೆಗಳ ಅನುಸರಣೆ ಕುರಿತು ಪ್ರಾಯೋಗಿಕ ಚರ್ಚೆಗಳು ನಡೆದವು.
ಯೋಜನಾ ಗ್ರಾಮಗಳಿಂದ ಸುಮಾರು ೪೦ ಗ್ರಾಮ ಸ್ವಯಂ ಸೇವಕರು ತರಬೇತಿಯನ್ನು ಪಡೆದುಕೊಂಡರು. ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರೋಹಿತ್ ಗೊಂಡಲಿ, ಅಕೌಂಟೆAಟ್ ನಾಗರಾಜ ಪರಮಣ್ಣವರ, ಮತ್ತು ವಿಸ್ತರಣಾಧಿಕಾರಿಗಳಾದ ಡಿ.ಕೆ.ಶ್ರೀನಿವಾಸ, ಲೋಹಿತ್ ಕಾಸರ, ಆನಂದ ಗೌಡ್ರ, ಬಸವರಾಜ ಹಿರೇಮಠ, ಶರಣಪ್ಪ ಪೂಜಾರ, ಶಾಬುದ್ಧೀನ್ ನರೇಗಲ್ಲ, ವಿವೇಕಾನಂದ ತಗ್ಗಾಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net