ಅಪಾಯಕಾರಿ ತಿರುವಿಗೆ ಮುಕ್ತಿ

New Project (1)
Published on

ಕಡಬ: ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿಯ ಮರ್ದಾಳ-ಇಚ್ಲಂಪಾಡಿ ಸಂಪರ್ಕ ರಸ್ತೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಪಂ ವ್ಯಾಪ್ತಿಯ ಪೇರಡ್ಕ ಸಮೀಪದ ಗರ್ಗಸ್‌ಪಾಲ್ ಎಂಬಲ್ಲಿನ ಅಪಾಯಕಾರಿ ತಿರುವಿನ ಸಮಸ್ಯೆಗೆ ಪರಿಹಾರವಾಗಿ ರಸ್ತೆ ವಿಸ್ತರಿಸುವ ಕಾರ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಸಲಾಗಿದೆ.

ಪೇರಡ್ಕ ಸಮೀಪದ ತಿರುವಿನ ರಸ್ತೆ ಬದಿಯಲ್ಲಿ ಚರಂಡಿಯ ತಡೆಗೋಡೆ ಕುಸಿದು ಬಿದ್ದಿದ್ದರೂ ದುರಸ್ತಿ ನಡೆಸದೆ ಅವೈಜ್ಞಾನಿಕ ರೀತಿಯಲ್ಲಿ ಇದ್ದುದರಿಂದ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇಲ್ಲಿ ಹಲವು ಅಪಘಾತ ಸಂಭವಿಸಿತ್ತು. ಕೆಲ ಸಮಯದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟ ಘಟನೆಯೂ ನಡೆದಿತ್ತು.

ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು. ಇಲ್ಲಿ ಹೆಚ್ಚುವರಿ ಚರಂಡಿ ಬಳಿ ಕುಸಿದ ತಡೆಗೋಡೆ ತೆರವು ಮಾಡಿ ಹೆಚ್ಚುವರಿ ಒಂದು ಮೋರಿ(ಸಿಮೆಂಟ್ ಪೈಪ್) ಅಳವಡಿಸಿ ವಿಸ್ತರಿಸಲಾಗಿದೆ. ತಿರುವನ್ನು ಅಗಲಗೊಳಿಸಲಾಗಿದೆ. ಈ ಮೂಲಕ ಇಲ್ಲಿನ ಸಮಸ್ಯೆಗೆ ಮುಕ್ತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net