ಕಬ್ಬಿನ ಬಾಕಿ ಹಣ ಬಿಡುಗಡೆಗೊಳಿಸಲಿ

25MNL1
Published on

ಮುನವಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀ ಕುಮಾರೇಶ್ವರ ಕಬ್ಬು ಬೆಳೆಗಾರರ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಪಟ್ಟಣದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯ ಎಡಿಎಂ ಸಂಜೀವ ನಾಯ್ಕಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕಳೆದ ಕಬ್ಬು ಹಂಗಾಮಿನಲ್ಲಿ ಪ್ರತಿ ಟನ್‌ಗೆ ೩,೧೦೦ ರೂ. ಘೋಷಿಸಿ ೩,೦೦೦ ರೂ. ಮಾತ್ರ ನೀಡಿ ಪ್ರತಿ ಟನ್‌ಗೆ ೧೦೦ ರೂ. ಬಾಕಿ ಉಳಿಸಿಕೊಂಡಿದೆ. ಕೆಲ ದಿನಗಳಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭವಾಗುತ್ತಿದ್ದು, ರೈತರ ಖಾತೆಗೆ ಕೂಡಲೇ ಬಾಕಿ ಹಣ ಜಮೆ ಮಾಡಬೇಕು. ಜತೆಗೆ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್‌ಗೆ ಕಬ್ಬಿಗೆ ೩,೫೦೦ ರೂ. ನೀಡಬೇಕೆಂದು ರೈತರು ಮನವಿ ಮಾಡಿದರು.

ಯಲ್ಲಪ್ಪ ಗೋಕಾಕ, ಮಾರುತಿ ನಲವಡೆ, ಪಂಚನಗೌಡ ದ್ಯಾಮನಗೌಡರ, ವಿ.ಎಚ್.ಪಾಟೀಲ, ಎಚ್.ಆರ್.ತೋರಣಗಟ್ಟಿ, ಸುರೇಶ ಭೋಸಲೆ, ಪಂಚಪ್ಪ ಗಂಗನ್ನವರ, ಬಸವರಾಜ ನಲವಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net