ಬಿಎಲ್​ಒ ಕಾರ್ಯದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಿ

Release teachers from BLO work
ಪ್ರಾಥಮಿಕ ಶಾಲಾ ಶಿಕರನ್ನು ಬಿಎಲ್​ಒ ಕಾರ್ಯದಿಂದ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ವಿಜಯಪುರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕರ ಸಂ ಜಿಲ್ಲಾ ಟಕದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣುರ ಅವರಿಗೆ ಮನವಿ ಸಲ್ಲಿಸಿದರು ಅರ್ಜುನ ಲಮಾಣಿ, ಹಣಮಂತ ಕೊಣದಿ, ಅಶೋಕ ದಡಕೆ ಮತ್ತಿತರರಿದ್ದಾರೆ.
Published on

ವಿಜಯಪುರ : ಪ್ರಾಥಮಿಕ ಶಾಲಾ ಶಿಕರನ್ನು ಬಿಎಲ್​ಒ ಕಾರ್ಯದಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕರ ಸಂ ಜಿಲ್ಲಾ ಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳಿವೆ. ಗ್ರಾ.ಪಂ. ಕಚೇರಿಗಳಿವೆ. ಕೈಗಾರಿಕಾ ತರಬೇತಿ ಕೇಂದ್ರಗಳಿವೆ ಮತ್ತು ಪಶು ವೈದ್ಯಕಿಯ ಇಲಾಖೆಯ ನೌಕರರಿದ್ದಾರೆ. ಅಲ್ಲದೆ, ಸರ್ಕಾರದಿಂದ ವೇತನ ಪಡೆಯುವ ಇತರೆ ಇಲಾಖೆಯ ನೌಕರರಿದ್ದಾರೆ.

ಈ ಎಲ್ಲ ಇಲಾಖೆಯ ನೌಕರರನ್ನು ಬಿಎಲ್​ಒ ಎಂದು ಕೆಲಸ ಮಾಡಲು ನೇಮಕ ಮಾಡಬೇಕು. ಕೇವಲ ಪ್ರಾಥಮಿಕ ಶಾಲಾ ಶಿಕರನ್ನು ಮಾತ್ರ ಬಿಎಲ್​ಒಗಳೆಂದು ನೇಮಕ ಡುತ್ತಿರುವುದು ಯಾವ ನ್ಯಾಯ? ಈ ತಂತ್ರದ ಹಿಂದೆ ಖಾಸಗಿ ಶಾಲೆಗಳ ಕೈವಾಡ ಕುಮ್ಮಕ್ಕು ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳ ಕಗ್ಗೊಲೆಯಾಗಲಿದೆ. ಆದಾಗಲೇ ಕನ್ನಡ ಶಾಲೆಗಳಲ್ಲಿ ಶಿಕರ ಕೊರತೆ, ಶಾಲಾ ಕೋಣೆಗಳ ಕೊರತೆ ಇದ್ದು, ಜಿಲ್ಲೆಯಾದ್ಯಂತ ಸುಮಾರು 1500 ಶಿಕರ ಹುದ್ದೆಗಳು ಖಾಲಿ ಇವೆ. ಅಲ್ಲದೆ, ಸರ್ಕಾರಿ ಶಾಲೆಗಳ ಪಾಠ ಭೋದನೆ ಜತೆಗೆ ಶಿಕರು ಇಲಾಖೆಯ ಹತ್ತು ಹಲವು ಕೆಲಸಗಳ ಮಾಡುವುದರ ಮೂಲಕ ಅರ ದಾಸೋಹ, ಮೊಟ್ಟೆ, ಬಾಳೆಹಣ್ಣು, ಸಿಲಿಂಡರ್​ ತರುವುದು, ಹಾಲು ವಿತರಣೆ, ಕಾಯಿಪಲ್ಲೆ ಖರೀದಿ, ಶಾಲೆ ಸ್ವಚ್ಛತೆ, ಜನಗಣತಿ, ಶಿಷ್ಯವೇತನ, ಮಕ್ಕಳ ಆಧಾರ ನೋಂದಣಿ, ದಾಖಲಾತಿ ಆಂದೋಲನ, ಹಾಜರಾತಿ ಆಂದೋಲನ, ಸಮುದಾಯದತ್ತ ಶಾಲೆ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಕಲೋತ್ಸವ ಮುಂತಾದ ಕಾರ್ಯಗಳು ಹೊರೆಯಾಗಿವೆ ಎಂದು ದೂರಿದರು.

ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇರೆ ಬೇರೆ ಇಲಾಖೆಯ ಸಿಬ್ಬಂದಿಗಳನ್ನು ಬಿಎಲ್​ಒಗಳಾಗಿ ನೇಮಕ ಮಾಡುವಂತೆ ಒತ್ತಾಯಿಸಿದರು. ಸಂದ ಹಣಮಂತ ಕೊಣದಿ, ಅಶೋಕ ದಡಕೆ, ಅಶೋಕ ಭಜಂತ್ರಿ, ಮಹಾಂತೇಶ ಪಾಟೀಲ, ಅಶೋಕ ಬೂದಿಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net