ಶಿಕ್ಷಣ ಕ್ಷೇತ್ರಕ್ಕೆ ಜಗತಾಪ ಕೊಡುಗೆ ಅನನ್ಯ

11-8 blk 6 jagtap
ವಳಸಂಗ ಕ್ರಾಸ್(ಅಂಬೆಸಾಂಗವಿ) ಹತ್ತಿರದ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಅವರ ಅಮೃತ ಮಹೋತ್ಸವ ಹಾಗೂ `ಯಶೋಧನ ಗ್ರಂಥ ಬಿಡುಗಡೆ' ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಗ್ರಾಪಂ ಅಧ್ಯಕ್ಷೆ ಶೋಭಾಬಾಯಿ, ಪದ್ಮಾಕರ ಪಾಟೀಲ್, ಬಾಬುರಾವ ಕಾರಬಾರಿ, ಡಾ.ಪ್ರಕಾಶ ಪಾಟೀಲ್, ಡಾ.ದಿನಕರರಾವ ಮೋರೆ, ಡಾ.ಶಿವಕುಮಾರ ಶೆಟಕಾರ, ಡಾ.ಅನೀಲಕುಮಾರ ತಳವಾಡೆ, ಡಾ.ಮಹೇಶ ಪಾಟೀಲ್ ಇದ್ದರು.
Published on

ಭಾಲ್ಕಿ: ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ. ಜಗತಾಪ ಯಶಸ್ವಿಯಾಗಿ ೭೫ ವರ್ಷ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸಿದ್ದು, ಶಿಕ್ಷಣ ಕ್ಷೇತ್ರ ಸುಧಾರಣೆಗೆ ಅವರ ಕೊಡುಗೆ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಶ್ಲಾಘಿಸಿದರು.

ವಳಸಂಗ ಕ್ರಾಸ್(ಅಂಬೆಸಾಂಗವಿ) ಹತ್ತಿರದ ವಿ.ಡಿ.ಜಗತಾಪ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಅವರ ಅಮೃತ ಮಹೋತ್ಸವ, ಸುವರ್ಣ ದಾಂಪತ್ಯ ಮಹೋತ್ಸವ ಮತ್ತು ಯಶೋಧನ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜಗತಾಪ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಅತ್ಯಂತ ದಕ್ಷ, ಪ್ರಾಮಾಣಿಕ, ನಿಸ್ವಾರ್ಥ ಭಾವದಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಶಿಕ್ಷಣದಿಂದಲೇ ಸರ್ವರ ಸರ್ವಾಂಗೀಣ ವಿಕಾಸ ಸಾಧ್ಯ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಇತೀಚೆಗೆ ಮಕ್ಕಳಲ್ಲಿ ಅಧ್ಯಯನಶೀಲತೆ ಕಡಿಮೆ ಆಗುತ್ತಿರುವುದು ಕಳವಳಕಾರಿ ಸಂಗತಿ. ಪಟ್ಟಣದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಈಜುಕೊಳ, ಜಿಮ್ಸ್ ಪ್ರಾರಂಭಿಸುವ ಬಗ್ಗೆ ಜಗತಾಪ ಮಾಡಿದ ಮನವಿ ಪುರಸ್ಕರಿಸಲಾಗುವುದು. ಪರಿಸರ ಪರಿಶುದ್ಧತೆಗಾಗಿ ಪ್ರತಿಯೊಬ್ಬರೂ ಸಿಸಿ ನೆಟ್ಟು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ. ಜಗತಾಪ ಮಾತನಾಡಿ, ನಾನು ಸಮಾಧಾನಕರ ಹಾಗೂ ಯಶಸ್ವಿಯಾಗಿ ಸೇವೆ ಸಲ್ಲಿಸಲು ಪ್ರೋತ್ಸಾಹ, ಸಹಕಾರ ನೀಡಿದ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ, ಮಾಜಿ ಶಾಸಕ ದಿ.ವಿಜಯಕುಮಾರ ಖಂಡ್ರೆ, ಮಾಜಿ ಎಂಎಲ್‌ಎ ಪ್ರಕಾಶ ಖಂಡ್ರೆ ಅವರನ್ನು ಮರೆಯಲಾಗದು. ನನ್ನ ವೃತ್ತಿ ಜೀವನದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಡಿ.ಜಿ. ಜಗತಾಪ ವೃತ್ತಿಯಲ್ಲಿ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಸಹನೆ, ತಾಳ್ಮೆಯಿಂದ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಮುಂದಿನ ಜೀವನ ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶೋಭಾಬಾಯಿ, ಜಿಪಂ ಮಾಜಿ ಅಧ್ಯಕ್ಷರಾದ ಪದ್ಮಾಕರ್ ಪಾಟೀಲ್, ಬಾಬುರಾವ ಕಾರಬಾರಿ, ಮಾಜಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ್, ಪ್ರಮುಖರಾದ ಡಾ.ದಿನಕರರಾವ ಮೋರೆ, ಡಾ.ಶಿವಕುಮಾರ ಶೆಟಕಾರ, ಡಾ.ಅನೀಲಕುಮಾರ ತಳವಾಡೆ, ಡಾ.ಮಹೇಶ ಪಾಟೀಲ್, ನಾಗನಾಥರಾವ ಬಗದೂರೆ, ಹೀರಾಚಂದ ವಾಘ್ಮಾರೆ, ಕೈಲಾಸನಾಥ ಮೆನಕೇರಿ, ನಾರಾಯಣ ಗಣೇಶ, ಎಲ್.ಜಿ. ಗುಪ್ತಾ, ಅಂಗದರಾವ ಜಗತಾಪ, ಡಾ.ಶರದ್ ಬಿರಾದಾರ, ಹಣಮಂತರಾವ ಚವ್ಹಾಣ್, ನಾಗಭೂಷಣ ಮಾಮಡಿ ಇತರರಿದ್ದರು.

ಡಿ.ಜಿ. ಜಗತಾಪ ಅಭಿನಂದನಾ ಸಮಿತಿ ಉಪಾಧ್ಯಕ್ಷ ವಿನೋದ ಜಗತಾಪ ಸ್ವಾಗತಿಸಿದರು. ಮಹೇಶ ಮುಳೆ ಮತ್ತು ಉದ್ಧವರಾವ ಹಲಸೆ ನಿರೂಪಣೆ ಮಾಡಿದರು. ಬಾಲಕೃಷ್ಣ ಪಾಟೀಲ್ ವಂದಿಸಿದರು. ಡಾ.ಶಾರದಾ ಜಾಧವ್ ಮಾನೆ ಮತ್ತು ವಿಶ್ರಾಂತ ಪ್ರಾಂಶುಪಾಲೆ ರೇಖಾ ಮಹಾಜನ್ ಗ್ರಂಥ ಪರಿಚಯ ಮಾಡಿಕೊಟ್ಟರು.

ದೇಹದಾನ: ಡಿ.ಜಿ.ಜಗತಾಪ ತಮ್ಮ ಮರಣದ ನಂತರ ದೇಹವನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದು ಬರೆದುಕೊಟ್ಟ ಪ್ರಮಾಣಪತ್ರವನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ ವಾಚನ ಮಾಡಿದರು.

ಡಿ.ಜಿ.ಜಗತಾಪ ಆರಂಭದಿಂದ ಶಿಸ್ತಿನ ಸಿಪಾಯಿ, ಖಡಕ್ ಅಧಿಕಾರಿ, ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಳಿವಯಸ್ಸಿನಲ್ಲೂ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ವಿನೂತನ ಮಾದರಿಯ ಸಲಹೆ ಸೂಚನೆ ಕೊಡುತ್ತಿರುವುದು ಅಭಿಮಾನದ ಸಂಗತಿ. ಯುವಶಕ್ತಿ ದುಶ್ಚಟ, ದುರ್ಗುಣಗಳಿಂದ ದೂರ ಉಳಿದು ಚಾರಿತ್ರ್ಯವಂತ ಬದುಕು ರೂಪಿಸಿಕೊಳ್ಳಬೇಕು.
| ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net