ಪೊಳಲಿಯಲ್ಲಿ ಯಕ್ಷಗಾನ ಕೃತಿ ಬಿಡುಗಡೆ

book
Published on

ಮಂಗಳೂರು: ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆದ ‘ಹರಿಲೀಲಾ ಯಕ್ಷನಾದೋತ್ಸವ’ ಸಮಾರಂಭದಲ್ಲಿ ನಂದಳಿಕೆಯ ಮುದ್ದಣ ಪ್ರಕಾಶನ- ಮುದ್ದಣ ಅಧ್ಯಯನ ಕೇಂದ್ರ ಪ್ರಕಟಿಸಿದ ‘ರತ್ನಾವತಿ ಕಲ್ಯಾಣ-ಕುಮಾರ ವಿಜಯ: ಪ್ರಸಂಗ ನಡೆ-ರಂಗ ತಂತ್ರ’ ಕೃತಿಯನ್ನು ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಇದೊಂದು ವಿಶಿಷ್ಟ ಯಕ್ಷಗಾನ ಸಂಬಂಧಿತ ಕೃತಿ. ಇಂತಹ ಪುಸ್ತಕ ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಪ್ರಯತ್ನ ಎಂದರು.

ಯಕ್ಷಗಾನದ ಹಿರಿಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹರಿನಾರಾಯಣ ಭಟ್, ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ್ ನಾವಡ, ಕೆ.ಎಲ್.ಕುಂಡಂತಾಯ, ನಂದಳಿಕೆ ಪ್ರಕಾಶನ- ಅಧ್ಯಯನ ಸಂಸ್ಥೆ ಅಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್, ಪುರುಷೋತ್ತಮ ಭಟ್ ನಿಡುವಜೆ ಮೊದಲಾದವರಿದ್ದರು.

ಅವಿನಾಶ್ ಬೈಪಾಡಿತ್ತಾಯ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಕೊಂಕಣಾಜೆ ಚಂದ್ರಶೇಖರ್ ಭಟ್ ಪ್ರಸ್ತಾವನೆಗೈದರು. ಸಾಯಿ ಪಲ್ಲವಿ ನಾವಡ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net