ಸುಧರ್ಮಾ ಕೃತಿ ಬಿಡುಗಡೆ

14 - Copy
Published on

ಮೈಸೂರು: ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ ರಚಿಸಿರುವ ‘ಸುಧರ್ಮಾ’ ಕೃತಿಯನ್ನು ಹಿರಿಯ ಪತ್ರಕರ್ತ ಎಚ್.ಆರ್.ಶ್ರೀಶ ಕೃತಿ ಬಿಡುಗಡೆ ಮಾಡಿದರು.


ಸುಧರ್ಮಾ ಕೇವಲ ಪತ್ರಿಕೆಯಲ್ಲ. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಇಂತಹ ಪತ್ರಿಕೆ ಮೈಸೂರಿನ ವರದರಾಜ ಮುನ್ನಡೆಸುತ್ತಿದ್ದರು ಎಂಬುದು ಸಂತೋಷದ ವಿಚಾರ ಎಂದು ಹಿರಿಯ ಪತ್ರಕರ್ತ ಎಚ್.ಆರ್.ಶ್ರೀಶ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಗಟ್ಟಿಯಾಗಿ ಬೇರೂರಿರುವ ಜಾತಿ ಮತ್ತು ಭ್ರಷ್ಟಾಚಾರವೀಗ ಪತ್ರಿಕೋದ್ಯಮಕ್ಕೂ ವಕ್ಕರಿಸಿದೆ. ಈ ಎರಡು ಸಂಗತಿಗಳು ಪತ್ರಿಕೋದ್ಯಮದ ನಿಜವಾದ ಶತ್ರುಗಳು. ಪತ್ರಿಕಾ ವೃತ್ತಿ ಇರುವುದು ಸಮಾಜ ಸೇವೆ ಮಾಡುವುದಕ್ಕೆ ಹೊರತು ಹಣ ಮಾಡುವುದಕ್ಕಲ್ಲ ಎಂದರು.

ಪತ್ರಿಕೋದ್ಯಮದ ಬಗ್ಗೆ ಹುಚ್ಚು ಇರುವವರು ಮಾತ್ರ ಮಾಧ್ಯಮ ಕ್ಷೇತ್ರ ಪ್ರವೇಶಿಸಬೇಕು. ದುಡ್ಡು, ಬಂಗಲೆ ಮತ್ತು ಅಧಿಕಾರದ ಬಗ್ಗೆ ವ್ಯಾಮೋಹ ಇರುವವರು ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ. ಪತ್ರಕರ್ತನಿಗೆ ಸಮಾಜದ ಎಲ್ಲ ಸ್ತರಗಳ ಬಗ್ಗೆ ಅರಿವಿರಬೇಕು. ಓದು ಮತ್ತು ಬರವಣಿಗೆಯ ಹುಚ್ಚು ಹಿಡಿದವನು ಮಾತ್ರ ಒಳ್ಳೆಯ ಪತ್ರಕರ್ತನಾಗಬಲ್ಲ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕಂ.ಕ. ಮೂರ್ತಿ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಸುಧರ್ಮಾ ಪತ್ರಿಕೆಯ ಸಂಪಾದಕಿ ಜಯಲಕ್ಷ್ಮೀ, ಡಾ.ಕೂಡ್ಲಿ ಗುರುರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net