ವಿಶೇಷ ಸಂಚಿಕೆ ’ರಾಮೋತ್ಸವ’ ಬಿಡುಗಡೆ

Release of special episode 'Ramotsava'
Published on

ಮಡಿಕೇರಿ:

ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ನಡದ ನಂ.೧ ಪತ್ರಿಕೆ ವಿಜಯವಾಣಿ ಹೊರ ತಂದಿರುವ ವಿಶೇಷ ಸಂಚಿಕೆ ’ರಾಮೋತ್ಸವ’ವನ್ನು ಇಲ್ಲಿನ ಆಂಜನೇಯ ದೇವಾಲಯದಲ್ಲಿ ಸೋಮವಾರ ನಡೆದ ವಿಶೇಷ ಪೂಜಾಧಿ ಕಾರ್ಯಕ್ರಮದ ವೇಳೆ ಗಣ್ಯರು ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಮಡಿಕೇರಿ ಟೌನ್ ಬ್ಯಾಂಕ್ ಅಧ್ಯಕ್ಷ ಸತೀಶ್ ಪೈ ಭಾರತಿಯರ ಶತಮಾನಗಳ ಕನಸು ನನಸಾಗುತ್ತಿರುವ ಶುಭದಿನದಲ್ಲಿ ಕನ್ನಡದ ನಂ. ೧ ದಿನಪತ್ರಿಕೆ ರೂಪಿಸಿರುವ ರಾಮೋತ್ಸವ ವಿಶೇಷ ಸಂಚಿಕೆ ಅತ್ಯದ್ಭುತವಾಗಿ ಮೂಡಿ ಬಂದಿದೆ. ಇದೊಂದು ಸಂಗ್ರಹಯೋಗ್ಯ ಸಂಚಿಕೆಯಾಗಿದ್ದು, ರಾಮ ಮಂದಿರದ ಹೋರಾಟದ ಹಾದಿಯನ್ನು ನೆನಪಿಸುವಂತಿದೆ. ಕೊಡಗು ಸೇರಿದಂತೆ ಕರ್ನಾಟಕದ ಜತೆ ಶ್ರೀ ರಾಮನಿಗೆ ಇರುವ ನಂಟನ್ನು ಈ ಸಂಚಿಕೆಯಲ್ಲಿ ಉತ್ತಮವಾಗಿ ಕಟ್ಟಿಕೊಡಲಾಗಿದೆ. ಈ ನಿಟ್ಟಿನಲ್ಲಿ ವಿಜಯವಾಣಿ ತಂಡ ಉತ್ತಮ ಕೆಲಸ ಮಾಡಿದೆ ಎಂದರು.

ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಮಾತನಾಡಿ, ಭವ್ಯ ರಾಮ ಮಂದಿರ ಆಯೋಧ್ಯೆಯಲ್ಲಿ ಮತ್ತೆ ತಲೆ ಎತ್ತಬೇಕಾದರೆ ಕರಸೇವಕರ ಪಾತ್ರ ಮಹತ್ವದ್ದು. ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಕೊಡಗಿನಿಂದಲೂ ಕರಸೇವಕರು ಅಯೋಧ್ಯೆಗೆ ತೆರಳಿ ತಮ್ಮ ಸೇವೆ ಸಲ್ಲಿಸಿದ್ದರು. ಇಂಥ ಹಲವು ಅನುಭವಗಳನ್ನು ಕಟ್ಟಿಕೊಡುವಲ್ಲಿ ವಿಶೇಷ ಸಂಚಿಕೆ ’ರಾಮೋತ್ಸವ’ ಯಶಸ್ವಿಯಾಗಿದೆ ಎಂದು ಹೇಳಿದರು.
ಹಿಂದೂ ಸಂಘಟನೆಗಳ ಪ್ರಮುಖರಾದ ಜಗದೀಶ್ ರೈ, ಪ್ರದೀಪ್, ಪವನ್ ಇದ್ದರು.

ಜ.೨೨ ಹಿಂದೂಗಳ ಪಾಲಿಗೆ ಮಹತ್ವದ ದಿನ. ಶತಮಾನಗಳ ನಂತರ ರಾಮ ತನ್ನ ತವರಿಗೆ ಬಂದು ತನ್ನ ಸ್ಥಳದಲ್ಲಿ ಆಸೀನನಾಗಿದ್ದಾನೆ. ಇದೊಂದು ಅದ್ಭುತ ಕ್ಷಣ. ಇಂಥ ಸಂದರ್ಭದಲ್ಲಿ ಕನ್ನಡದ ನಂ.೧ ಪತ್ರಿಕೆ ವಿಜಯವಾಣಿ ’ರಾಮೋತ್ಸವ’ ವಿಶೇಷ ಸಂಚಿಕೆ ರೂಪಿಸಿರುವುದು ಶ್ಲಾಘನೀಯ. ಈ ಸಂಚಿಕೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಹೊಂದಿದ್ದು, ಓದುಗರಿಗೆ ಮೆಚ್ಚುಗೆ ಆಗುವುದರಲ್ಲಿ ಸಂಶಯವಿಲ್ಲ.
- ಮನುಮಂಜುನಾಥ್, ನಗರ ಬಿಜೆಪಿ ಅಧ್ಯಕ್ಷ, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net