15ರಂದು ‘ಸಿದ್ದರಾಮಯ್ಯ-75’ ಕೃತಿ ಬಿಡುಗಡೆ

Siddaramiah
Published on


ಮೈಸೂರು: ಡಾ.ಹರೀಶ್‌ಕುಮಾರ್ ಅವರ ‘ಸಿದ್ದರಾಮಯ್ಯ-75’ ಸಮಾಜವಾದಿ ಜನನಾಯಕನ ಜೀವನ-ಸಿದ್ಧಾಂತ-ಸಾಧನೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ನ.15 ರಂದು ಸಂಜೆ 4.30 ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ.

ಸಮಾಜವಾದಿ ಪ.ಮಲ್ಲೇಶ್ ದಿಕ್ಸೂಜಿ ಭಾಷಣ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾಗವಹಿಸಲಿದ್ದಾರೆ ಎಂದು ಲೇಖಕ ಡಾ.ಹರೀಶ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ವಿಚಾರವಾದಿ ಬಳಗದ ಸದಸ್ಯರಾದ ಹಿನಕಲ್ ಪ್ರಕಾಶ್, ಮರಡೀಪುರ ರವಿಕುಮಾರ್, ಮಹದೇವಸ್ವಾಮಿ ಬೋಗಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net