

ಮೈಸೂರು: ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ‘ತಾಂತ್ರಿಕ ಶಿಕ್ಷಣದ ಹಾದಿಯಲ್ಲಿ ಸಾಗಿದ ಪ್ರೊ.ಧನಂಜಯ ಅವರ ಸ್ಫೂರ್ತಿದಾಯಕ ಪಯಣ’ ಎಂಬ ಆಂಗ್ಲ ಕೃತಿಯನ್ನು ಭಾನುವಾರ ಸಂಜೆ ಬಿಡುಗಡೆ ಮಾಡಲಾಯಿತು.
ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಮಾತನಾಡಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ ಬ್ರಾೃಂಡ್ ನೇಮ್ ಬರುವಂತೆ ವಾಡಿದವರಲ್ಲಿ ಪ್ರೊ.ಧನಂಜಯ ಕೂಡ ಒಬ್ಬರು. ರಾಜ್ಯದ ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು, ಈ ತಾಂತ್ರಿಕ ಮಹಾವಿದ್ಯಾಲಯವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇರಳ ತಾಂತ್ರಿಕ ವಿವಿಂು ಆಡಳಿತ ಮಂಡಳಿಯ ವಾಜಿ ಸದಸ್ಯ ಪ್ರೊ.ಪಿ.ಒ.ಜೆ.ಲೆಬ್ಬಾ, ವಿಶ್ರಾಂತ ಕುಲಪತಿ ಡಾ.ಕೆ.ಬಲವೀರ ರೆಡ್ಡಿ ಇನ್ನಿತರರಿದ್ದರು.