

ಮೈಸೂರು: ಪತ್ರಕರ್ತರು ನಕರಾತ್ಮಕ ವಿಷಯಗಳಿಗೆ ಆದ್ಯತೆ ನೀಡದೆ ರಚನಾತ್ಮಕ ವಿಷಯಗಳ ಒತ್ತು ನೀಡಬೇಕು ಎಂದು ಅಸ್ಸಾಂ ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ ನಾಗರಾಜು ಸಲಹೆ ನೀಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ರಚನೆಯ ಸುದ್ದಿ ಬರಹ ಮತ್ತು ವರದಿಗಾರಿಕೆ ಅನುವಾದಿತ ಕೃತಿ ಡೈನಾಮಿಕ್ಸ್ ಆಫ್ ರಿಪೋರ್ಟಿಂಗ್ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಾವು ಬರೆಯುವ ಸುದ್ದಿಗಳು ಆಕ್ರೋಶ ಭರಿತವಾಗಿರಬಾರದು. ಬದಲಿಗೆ ಸಾತ್ವಿಕ ಸಿಟ್ಟನ್ನು ಮಾತ್ರ ವ್ಯಕ್ತಗೊಳಿಸುವಂತಿರಬೇಕು. ಜತೆಗೆ ಮತ್ತೊಬ್ಬರ ಖಾಸಗಿ ಹಕ್ಕುಗಳನ್ನು ಗೌರವಿಸುವಂತಿರಬೇಕು ಎಂದರು.
ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ ರವಿಕುಮಾರ್, ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಇದ್ದರು.