

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಭಜನೆಯ ಮಹತ್ವವನ್ನು ಜಗತ್ತಿಗೆ ಸಾರಲು ಹೊರಟಿರುವ ನಮಸ್ತೆ ಭಾರತ್ ಕಾರ್ಯ ಪ್ರಶಂಸನೀಯ. ಟ್ರಸ್ಟ್ ಹಲವು ಮುಖಗಳಲ್ಲಿ ಈ ನೆಲದ ಸಂಸ್ಕೃತಿಯ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆನೆಗುಡ್ಡೆ ದೇವಳ ಧರ್ಮದರ್ಶಿ ಕೆ.ರಮಣ ಉಪಾಧ್ಯಾಯ ಹೇಳಿದರು.
ಮಂದಾರ್ತಿ ನಮಸ್ತೆ ಭಾರತ್ ಟ್ರಸ್ಟ್ ವತಿಯಿಂದ ಶ್ರೀಕ್ಷೇತ್ರ ಮಂದಾರ್ತಿಯಲ್ಲಿ ಜ.18ರಂದು ನಡೆಯಲಿರುವ 108 ತಂಡಗಳ ರಾಷ್ಟ್ರೀಯಮಟ್ಟದ ಕುಣಿತ ಭಜನಾ ಸ್ಪರ್ಧೆ ಸಂಕೀರ್ತನಾ ಮಂದಾರ್ತಿಯ ಆಮಂತ್ರಣ ಪತ್ರಿಕೆಯನ್ನು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಲ್ಲೂರು ದೇಗುಲ ಮಾಜಿ ಧರ್ಮದರ್ಶಿ ಬಿ.ಎಂ.ಸುಕುಮಾರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಉದ್ಯಮಿಗಳಾದ ರಾಜೇಶ್ ಕಾವೇರಿ, ಸಂಪತ್ ಕುಮಾರ್ ಶೆಟ್ಟಿ, ಪ್ರಣಯ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ನಮಸ್ತೆ ಭಾರತ್ ಟ್ರಸ್ಟ್ ಪ್ರವೀಣ್ ಯಕ್ಷಿಮಠ ಮತ್ತಿತರರು ಉಪಸ್ಥಿತರಿದ್ದರು. ನಮಸ್ತೆ ಭಾರತ್ ಟ್ರಸ್ಟ್ ಪ್ರಮೋದ್ ಮಂದಾರ್ತಿ ನಿರೂಪಿಸಿದರು. ಉದಯ್ ಭಾಸ್ಕರ್ ಶೆಟ್ಟಿ ವಂದಿಸಿದರು. ಮಂದಾರ್ತಿ ಶ್ರೀರಾಮ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗಿತು.
ಉತ್ತಮ ಸಂಸ್ಕಾರ ಹೊಂದಲು ಭಜನೆ ಅತ್ಯುತ್ತಮ ಆಯ್ಕೆ. ಭಜನೆ, ಶ್ರದ್ಧೆಯ ಭಜಕರಿಗೆ ಭಗವಂತನ ಕೃಪೆಯಿದೆ. ಸಂಕೀರ್ತನ ಮಂದಾರ್ತಿ ಇಡೀ ಸಮಾಜವನ್ನು ತನ್ನತ್ತ ಸೆಳೆಯುವ ಮೂಲಕ ಭಜನೆಗೆ ನೀಡುವ ಪ್ರೋತ್ಸಾಹ ಅವಿಸ್ಮರಣೀಯ. -ವಿಕಾಸ್ ಹೆಗ್ಡೆ ಕೊಳ್ಕೆರೆ ವಕೀಲ https://www.vijayavani.net/time-has-come-for-the-bus-stand https://www.vijayavani.net/shivarama-karanthas-memorial-day