ಎಚ್.ಎಸ್.ಅನುಪಮಾರ 3 ಕೃತಿಗಳ ಬಿಡುಗಡೆ

16
Published on

ಮೈಸೂರು: ಹೋರಾಟಗಾರ್ತಿ, ಲೇಖಕಿ ಡಾ.ಎಚ್.ಎಸ್. ಅನುಪಮಾ ಅವರ ‘ಜನಸೇವಾಸಕ್ತೆ ಯಶೋಧರ ದಾಸಪ್ಪ’, ‘ಗಡಿ ದಾಟಿದ ಹೆಣ್ಣುಗಳ ಕಥನ’, ‘ಪ್ಲಾಸ್ಟಿಕ್ ಪರಿಸರ’ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಶನಿವಾರ ನರವೇರಿತು.

ಅಂಗಳ ಸಾಹಿತ್ಯ ಬಳಗ ಮತ್ತು ಗದಗಿನ ಲಡಾಯಿ ಪ್ರಕಾಶನ ಸಹಯೋಗದಲ್ಲಿ ಜೆಎಲ್‌ಬಿ ರಸ್ತೆಯ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್‌ರಸ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಜಿ.ಎಸ್. ಜಯದೇವ ಕೃತಿಗಳ ಬಿಡುಗಡೆ ಮಾಡಿದರು. ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಪತ್ರಕರ್ತೆ ರಶಿ ಕೃತಿಗಳ ಕುರಿತು ಮಾತಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net