

ಹಿರೇಕೆರೂರ: ಸರ್ವಜ್ಞ ಪ್ರಾಧಿಕಾರಕ್ಕೆ ಮೀಸಲಿಟ್ಟ ಹಣವನ್ನು ಬಜೆಟ್ ಘೋಷಣೆ ಜತೆಗೆ ಬಿಡುಗಡೆ ಮಾಡಿ, ಅಭಿವೃದ್ಧಿ ಕಾರ್ಯ ಪ್ರಾರಂಭಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಡಾ.ಪ್ರಭಾಕರಗೌಡ ಎಚ್. ಅವರ ಮೂಲಕ ಸರ್ಕಾರಕ್ಕೆ ತಾಲೂಕು ಕರವೇ ಘಟಕದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಕರವೇ ಅಧ್ಯಕ್ಷ ಮಾರುತಿ ಪೂಜಾರ ಮಾತನಾಡಿ, ನಾಡಿನ ಹೆಮ್ಮೆಯ ತ್ರಿಪದಿ ಕವಿ ಸರ್ವಜ್ಞನ ಜನ್ಮಸ್ಥಳ ಅಭಿವೃದ್ಧಿ ಕಾಣದೇ ಹಿಂದುಳಿದಿದೆ. ಈ ಹಿಂದಿನ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ಆರಂಭಿಸುವ ಮೂಲಕ ಹಣ ಮೀಸಲಿಟ್ಟಿತ್ತು. ಈಗಿನ ಸರ್ಕಾರ ಪ್ರಾಧಿಕಾರಕ್ಕೆ ಮೀಸಲಿಟ್ಟ ಹಣ ತಡೆ ಹಿಡಿದಿರುವುದು ವಿಷಾದನೀಯವಾಗಿದೆ. ಸರ್ಕಾರ ಕೂಡಲೆ ಸರ್ವಜ್ಞನ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಅಬ್ಬು ಕೋಡಮಗ್ಗಿ, ಜಯಕುಮಾರ ಉಪ್ಪಾರ, ಕಾಂತೇಶ ಯಡಿಗೋಡ, ಬಸವರಾಜ ಹರಿಜನ, ಆನಂದ ಹಂಸಭಾವಿ ಇದ್ದರು.