ನಾಲ್ಕು ಕೃತಿಗಳ ಬಿಡುಗಡೆ ಫೆ. 6ರಂದು

WhatsApp Image 2025-01-29 at 12.14.32 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ಡಾ. ಎಂ.ಆರ್. ನಾಗರಾಜ ರಾವ್ ಅವರ 4 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಫೆ. 6ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿದೆ ಎಂದು ಲೇಖಕ ಡಾ. ಎಂ.ಆರ್. ನಾಗರಾಜ ರಾವ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆ ದಿನಗಳು', `ಭಕ್ತಿ ವಿಜಯ', `ಕೊನೆಯ ದಿನಗಳು' ಮತ್ತು `ಕ್ರೀಡಾ ಸಾಧಕರು' ಕೃತಿಗಳನ್ನು ರಾಜ್ಯ ಸಿರಿಗನ್ನಡ ವೇದಿಕೆ ಅಧ್ಯಕ್ಷ ಜಿ.ಎಸ್. ಗೋನಾಳ ಬಿಡುಗಡೆ ಮಾಡುವರು. ಬೀದರನ ಹಿರಿಯ ಲೇಖಕ ಡಾ. ಎಂ.ಜಿ. ದೇಶಪಾಂಡೆ ಉಪಸ್ಥಿತರಿರುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net