

ಮೈಸೂರು: ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಕವಯಿತ್ರಿ ಡಾ.ಸೌಗಂಧಿಕಾ ವಿ.ಜೋಯಿಸ್ ಅವರ ‘ಸಪ್ತದಶಿ ಹಾಯ್ಕುಗಳ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಸೌಗಂಧಿಕಾ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಪ್ಪ ಬೀಳಗಿ ಅವರು ಕೃತಿಯನ್ನು ಬಿಡುಗಡೆ ಮಾಡಿದರು. ಕೃತಿ ಕುರಿತು ಖ್ಯಾತ ಗಜಲ್‌ಕಾರ ಡಾ.ಮಲ್ಲಿನಾಥ ಎಸ್.ತಳವಾರ ಮಾತನಾಡಿದರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್, ಅಪರ ಜಿಲ್ಲಾಧಿಕಾರಿ ಶಿವರಾಜು, ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಎ.ಹೇಮಗಂಗಾ, ಕವಯಿತ್ರಿ ಡಾ.ಸೌಗಂಧಿಕಾ ವಿ.ಜೋಯಿಸ್, ಸಿ.ವಾಣಿ ರಾಘವೇಂದ್ರ, ಬಿ.ಶೋಭಾ ಇತರರಿದ್ದರು.