

ಮೈಸೂರು: ದಸರಾ ಚಲನಚಿತ್ರೋತ್ಸವ ಉಪ ಸಮಿತಿಯಿಂದ ನಗರದಲ್ಲಿ ಸೋಮವಾರ ಸಿನಿಮಾ ಸಮಯ ದೈನಂದಿನ ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು.
ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಕೆ.ಎನ್.ಬಸವರಾಜು, ಸಮಿತಿಯ ಕಾರ್ಯಾಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಟಿ.ಕೆ.ಹರೀಶ್, ಕಲಾತ್ಮಕ ನಿರ್ದೇಶಕ ಮನು ಇತರರು ಇದ್ದರು.
‘ಸಿನಿಮಾ ಸಮಯ’ವು ಮೈಸೂರು ದಸರಾ ಚಲನಚಿತ್ರೋತ್ಸವದ ನಿತ್ಯ ಅವತರಣಿಕೆಯಾಗಿದ್ದು, ಚಿತ್ರೋತ್ಸವದ ದಿನಗಳಲ್ಲಿ ಯಾವೆಲ್ಲ ಚಿತ್ರಗಳು ಯಾವ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು ಎನ್ನುವುದನ್ನು ತಿಳಿಸುತ್ತದೆ.
ಕನ್ನಡ ಹಾಗೂ ವಿಶ್ವದ ಪ್ರಪಂಚದ ಹಲವು ಭಾಷೆಗಳ, ಹಲವು ಪ್ರಕಾರಗಳ ಚಲನಚಿತ್ರ ಪ್ರದರ್ಶನ ಮತ್ತು ಅದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ, ಸಿನಿಮಾ ತಂಡದವರಿಂದ ಅಭಿಪ್ರಾಯ ಹೀಗೆ ಅನೇಕ ವಿಚಾರಗಳನ್ನು ಪ್ರಕಟಿಸುತ್ತದೆ ಎಂದು ಕಾರ್ಯದರ್ಶಿ ಟಿ.ಕೆ.ಹರೀಶ್ ಮಾಹಿತಿ ನೀಡಿದರು.