ನಾಳೆ ಅಭಿನಂದನಾ ಗ್ರಂಥ ಬಿಡುಗಡೆ

28M.D.R.4
Published on

ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯ ಎಚ್.ಕೆ.ಮರಿಯಪ್ಪ ಕಾನ್ವೆಂಟ್ ಆವರಣದಲ್ಲಿ ಡಿ.30ರಂದು ಸಂಜೆ 4.30ಕ್ಕೆ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯ ವತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಎಚ್.ಕೆ.ವೀರಣ್ಣಗೌಡ ಅವರ ಹೆಸರಿನಲ್ಲಿ ‘ಎಚ್‌ಕೆವಿ ಹಬ್ಬ’ ಹಾಗೂ ಅವರ ಸಹೋದರ ಎಚ್.ಕೆ.ಮರಿಯಪ್ಪ ಅವರ ಪರಿಷ್ಕೃತ ಅಭಿನಂದನಾ ಗ್ರಂಥ ‘ಹೊನ್ನ ಕಳಸ’ ಬಿಡುಗಡೆ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಸ್ವರೂಪ್ ಚಂದ್ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದು ಅವರ ಮಾರ್ಗದರ್ಶನದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಅನಿವಾಸಿ ಭಾರತೀಯ ಡಾ.ಎಚ್.ಕೆ.ಮರಿಯಪ್ಪ ಉದ್ಘಾಟಿಸಲಿದ್ದು, ಪತ್ರಕರ್ತ ರಾಜು ಮಳವಳ್ಳಿ ಮುಖ್ಯಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಟಿ.ಚಲುವಯ್ಯ, ಎಚ್.ಶಿವರಾಮೇಗೌಡ, ಬಿಇಒ ಸಿ.ಎಚ್.ಕಾಳಿರಯ್ಯ, ಪುರಸಭಾ ಸದಸ್ಯರಾದ ಎಂ.ಐ.ಪ್ರವೀಣ್, ಎಸ್.ಮಹೇಶ್, ಎಂ.ಬಿ.ಸಚಿನ್, ಪ್ರಮೀಳಾ, ಪ್ರಿಯಾಂಕಾ ಪಿ.ಅಪ್ಪುಗೌಡ , ಕೋಕಿಲಾ ಅರುಣ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಆಡಳಿತಾಧಿಕಾರಿ ಯು.ಎಸ್.ರವಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಕೆ.ಎನ್.ವರದರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net