

ಮೈಸೂರು: ಹೋರಾಟಗಾರ್ತಿ, ಲೇಖಕಿ ಡಾ.ಎಚ್.ಎಸ್. ಅನುಪಮಾ ಅವರ ‘ಜನಸೇವಾಸಕ್ತೆ ಯಶೋಧರ ದಾಸಪ್ಪ’, ‘ಗಡಿ ದಾಟಿದ ಹೆಣ್ಣುಗಳ ಕಥನ’, ‘ಪ್ಲಾಸ್ಟಿಕ್ ಪರಿಸರ’ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಡಿ.2ರಂದು ಸಂಜೆ 4.30ಕ್ಕೆ ಜೆಎಲ್‌ಬಿ ರಸ್ತೆಯ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್‌ರಸ ಸಭಾಂಗಣದಲ್ಲಿ ಹಮಿಕೊಳ್ಳಲಾಗಿದೆ.
ಅಂಗಳ ಸಾಹಿತ್ಯ ಬಳಗ ಮತ್ತು ಗದಗಿನ ಲಡಾಯಿ ಪ್ರಕಾಶನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿಂತಕ ಜಿ.ಎಸ್. ಜಯದೇವ ಕೃತಿಗಳ ಬಿಡುಗಡೆ ಮಾಡುವರು. ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಪತ್ರಕರ್ತೆ ರಶಿ ಕೃತಿಗಳ ಕುರಿತು ಮಾತಾಡುವರು ಎಂದು ಪ್ರಕಾಶಕ ಬಸವರಾಜ ಸೂಳಿಬಾವಿ ತಿಳಿಸಿದ್ದಾರೆ.