

ಚಿಕ್ಕನಾಯಕನಹಳ್ಳಿ: ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರು, ಮಧುಗಿರಿ, ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಎಪಿಎಂಸಿಗಳಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ರೈತರು ರಾಗಿಯನ್ನು ವಾರಾಟ ವಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ರಾಗಿ ಖರೀದಿಗೆ ಇದ್ದಂತಹ ಕೆಲ ನಿಬಂಧನೆಗಳನ್ನು ಸರಳೀಕರಣಗೊಳಿಸಿ, ರೈತರೇ ನೇರವಾಗಿ ಮಾರಾಟ ಮಾಡುವಂತೆ ಮಾಡಲಾಗಿದೆ. ಪ್ರತೀ ಕ್ವಿಂಟಾಲ್‌ಗೆ 3150 ರೂಪಾಯಿ ನಿಗದಿ ಪಡಿಸಲಾಗಿದೆ. ರೈತನೊಬ್ಬ 15 ರಿಂದ ಗರಿಷ್ಠ 75 ಕ್ವಿಂಟಾಲ್‌ವರೆಗೆ ಮಾರಾಟ ಮಾಡಬಹುದು ಎಂದರು.
ತುಮಕೂರಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಎಂ.ಸಿ.ಶ್ರೀನಿವಾಸಯ್ಯ ಮಾತನಾಡಿ, 2019-20ನೇ ಸಾಲಿನಲ್ಲಿ ರೈತರಿಂದ ಗುಣಮಟ್ಟದ ರಾಗಿ ಖರೀದಿ ಮಾಡಲಾಗುತ್ತದೆ. ರೈತರು ಹೆಸರು ನೋಂದಣಿ ಮಾಡಿಸಬೇಕು. ಪೂರ್ಣ ಒಣಗಿದ ಸ್ವಚ್ಛಗೊಳಿಸಿದ ಮತ್ತು ಗ್ರೇಡರ್‌ಗಳಿಂದ ದೃಢೀಕರಿಸಿದ ಗುಣಮಟ್ಟದ ರಾಗಿ ಖರೀದಿಸಲಾಗುತ್ತದೆ. ಕಳಪೆ ರಾಗಿ ತಿರಸ್ಕರಿಸಲಾಗುತ್ತದೆ. 50 ಕೆಜಿ ಸಾಮರ್ಥ್ಯದ ಗೋಣಿ ಚೀಲದಲ್ಲಿಯೇ ರಾಗಿಯನ್ನು ರಾಗಿಯ ಮಾದರಿಯೊಂದಿಗೆ ಗ್ರೇಡರ್‌ಗಳಿಂದ ದೃಢೀಕರಿಸಿಕೊಳ್ಳಬೇಕು. ರಾಗಿ ಮಾರಾಟದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಜು ಮಾತನಾಡಿ, ರೈತರು ತಮಗೆ ಅಗತ್ಯವಾಗಿರುವಷ್ಟು ರಾಗಿಯನ್ನು ಇಟ್ಟುಕೊಂಡು, ಗುರುತಿನ ಸಂಖ್ಯೆಯನ್ನು ನೀಡಿ ಉಳಿದ ರಾಗಿ ಖರೀದಿಕೇಂದ್ರಕ್ಕೆ ಮಾರಾಟ ವಾಡಬಹುದು. ಪಟ್ಟಣದ ಎಪಿಎಂಸಿಯಲ್ಲಿ 20 ರಿಂದ 30ಸಾವಿರ ಕ್ವಿಂಟಾಲ್ ರಾಗಿ ಖರೀದಿಯಾಗಬಹುದು ಎಂಬ ನಿರೀಕ್ಷೆ ಎಂದರು.
ತಹಸೀಲ್ದಾರ್ ತೇಜಸ್ವಿನಿ, ತಾಪಂ ಅಧ್ಯಕ್ಷೆ ಚೇತನಾಗಂಗಾಧರ್, ತಾಪಂ ಸ್ಥಾಯಿಸಮಿತಿ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಸಿಂಗದಹಳ್ಳಿ ರಾಜ್‌ಕುವಾರ್, ಶೈಲಾ ಶಶಿಧರ್, ಕಲ್ಯಾಣಿಬಾಯಿ, ಆಹಾರ ಶಿರಸ್ತೇದಾರ್ ಕಿರಣ್‌ಕುವಾರ್ ಮತ್ತಿತರರು ಇದ್ದರು.