ಮುತಾಲಿಕ್ ಮೇಲೆ ವಿಧಿಸಿರುವ ನಿರ್ಬಂಧ ಸಡಿಲಿಸಿ

h1-mutalik
Published on

ಹುಬ್ಬಳ್ಳಿ: ಪ್ರಮೋದ ಮುತಾಲಿಕ್ ಅವರಿಗೆ ಶಿವಮೊಗ್ಗ ಜಿಲ್ಲೆ ನಿರ್ಬಂಧ ಖಂಡಿಸಿ ಶ್ರೀರಾಮ ಸೇನಾ ಕಾರ್ಯಕರ್ತರು, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮುತಾಲಿಕ್ ಅವರು ಅಪ್ಪಟ ರಾಷ್ಟ್ರಭಕ್ತರು. ಕಳೆದ 50 ವರ್ಷಗಳಿಂದ ದೇಶ, ಧರ್ಮದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇಂಥ ವ್ಯಕ್ತಿಯ ಮೇಲೆ ಸಕಾರಣವಿಲ್ಲದೇ ಶಿವಮೊಗ್ಗ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದು ಖಂಡಿನೀಯ. ಕೂಡಲೇ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ನಂತರ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಿದರು.

ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಮುಖರಾದ ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ಬಸು ದುರ್ಗದ , ಗುರು ಪಾಟೀಲ, ಪ್ರವೀಣ ಮಾಳವದಕರ, ಮಹಾಂತೇಶ ತೊಂಗಳಿ, ಗುಣಧರ ದಡೂತಿ, ನಾಗರಾಜ ಸವತಿಕಾಯಿ, ವಿಜಯ ದೇವರಮನಿ ನಾಗರಾಜ ಹುರಕಡ್ಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net