

ಶಿವಮೊಗ್ಗ: ಶಿಕ್ಷಕರ ದಿನ(ಸೆ.೫)ದೊಳಗೆ ಡಿಜಿಟಲ್ ಲೈಬ್ರರಿಗೆ ಮರು ಚಾಲನೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಲೈಬ್ರರಿ ಯೋಜನೆ ಅನುಷ್ಠಾನಗೊಳಿಸಿದ್ದು, ಚಿಕ್ಕ ಮಕ್ಕಳಿಂದ ಐಎಎಸ್‌ವರೆಗೂ ಅಗತ್ಯವಿರುವ ಎಲ್ಲ ಪುಸ್ತಕಗಳು ಸೇರಿ 40 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು ಇ-ಗ್ರಂಥಾಲಯದಲ್ಲಿ ದೊರೆಯಲಿವೆ. ಅದರ ಸದಸ್ಯತ್ವಕ್ಕಾಗಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಈಗಾಗಲೇ 3.35 ಲಕ್ಷ ಮಂದಿ ಸದಸ್ಯರಾಗಿದ್ದಾರೆ ಎಂದರು.
ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸಲಾಗುತ್ತಿದ್ದು, ಪಠ್ಯಪುಸ್ತಕ ಪರಿಷ್ಕರಣೆಗೊಳಿಸುವ ಸಂಬAಧ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ವರ್ಷಗಳಲ್ಲಿ ಶಿಕ್ಷಣ ಇಲಾಖೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಉದ್ದೇಶಿಸಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣ, ಶಾಲೆಗಳ ಉನ್ನತೀಕರಣ, ಕಾಲೇಜು ಸ್ಥಾಪನೆ ಸೇರಿ ಅನೇಕ ಮಹತ್ವದ ಬದಲಾವಣೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2ನೇ ಬಾರಿಗೆ ಪರೀಕ್ಷೆ(ಸಪ್ಲಿಮೆಂಟರಿ)ಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ 95 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಮಾಸಾಂತ್ಯದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲ ಸಪ್ಲಿಮೆಂಟರಿಯಲ್ಲಿ ವಿ-Àಲರಾದವರು ಸುಮ್ಮನೆ ಒಂದು ವರ್ಷ ಮನೆಯಲ್ಲಿ ಕೂರುವುದನ್ನು ತಪ್ಪಿಸಲು ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಶಿಕ್ಷಣ ಇಲಾಖೆಯಲ್ಲಿರುವಷ್ಟು ಸಮಸ್ಯೆಗಳು ಬೇರೆಲ್ಲೂ ಇಲ್ಲ. 1.20ಕೋಟಿ ಮಕ್ಕಳು ಇಲಾಖೆ ಅಡಿಯಲ್ಲಿ ಬರಲಿದ್ದಾರೆ. ಶಿಕ್ಷಣ ಸಚಿವನಾಗಿ ಅಽಕಾರ ವಹಿಸಿಕೊಂಡ ನಂತರ ಇಲಾಖೆಯ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತಿದ್ದೇನೆ. ಶಾಲೆಗಳ ಆರಂಭದ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಅಽಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಳೆದ ಮೂರು ತಿಂಗಳಲ್ಲಿ 30 ಸಾವಿರ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. 13,500 ಶಿಕ್ಷಕರು ಮತ್ತು 10 ಸಾವಿರ ಅತಿಥಿ ಶಿಕ್ಷಕರ ನೇಮಕವಾದರೆ ಇಲಾಖೆ ಮೇಲೆ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು.
ಜಿಲ್ಲಾಽಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.
ಗಿಣಿಶಾಸö ಹೇಳಲು ಲಾಯಕ್ಕು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಾಲಿ ಇರುವ ಬಸ್ ನಿಲ್ದಾಣಗಳಲ್ಲಿ ಗಿಣಿ ಶಾಸö ಹೇಳುವುದಕ್ಕೆ ಲಾಯಕ್ಕಾಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಇನ್ನಾರು ತಿಂಗಳಷ್ಟೇ ಇರಲಿದೆ ಎಂಬ ಯತ್ನಾಳ್ ಹೇಳಿಕೆಗೆ ಕಿಡಿಕಾರಿದ ಅವರು, ಯಾವುದಾದರೂ ಬಸ್ ನಿಲ್ದಾಣಗಳು ಖಾಲಿ ಇದ್ದರೆ ಅಲ್ಲಿಗೆ ಹೋಗಿ ಅವರು ಗಿಣಿಶಾಸö ಹೇಳುವುದನ್ನು ಆರಂಭಿಸಲಿ. ಅದಕ್ಕೆ ಅವರು ಸಮರ್ಥರಾಗಿದ್ದಾರೆ ಎಂದು ಟಾಂಗ್ ಕೊಟ್ಟರು.
ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ
ಶರಾವತಿ ಸಂತ್ರಸ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಭೂಒಡೆತನಕ್ಕೆ ಸಂಬAಽಸಿದAತೆ ಬಹುದಿನಗಳಿಂದ ಕಗ್ಗಂಟಾಗಿ ಉಳಿದಿರುವ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಹಾಗೂ ರೈತರ ಹಿತ ಕಾಯುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅಡಿಷನಲ್ ಅಡ್ವೋಕೇಟ್ ಜನರಲ್ ಸೇರಿ ರಾಜ್ಯಮಟ್ಟದ ಅಽಕಾರಿಗಳು ಹಾಗೂ ತಜ್ಞರನ್ನೊಳಗೊಂಡAತೆ ಈಗಾಗಲೇ ಅನೇಕ ಮಹತ್ವದ ಸಭೆಗಳನ್ನು ಏರ್ಪಡಿಸಿ ಸಮಾಲೋಚಿಸಲಾಗಿದೆ. ಈ ವಿಷಯಕ್ಕೆ ಸಂಬAಽಸಿದAತೆ ಅಗತ್ಯವಿದ್ದಲ್ಲಿ ಕೇಂದ್ರದ ಸಹಕಾರ ಪಡೆಯಲಾಗುವುದಲ್ಲದೆ, ಇದಕ್ಕೆ ಸಂಬAಽಸಿದAತೆ ನ್ಯಾಯಾಲಯದಲ್ಲಿ ಸಮರ್ಥವಾಗಿ ವಿಷಯ ಮಂಡನೆ ಮಾಡಲಾಗುವುದು ಎಂದರು.